ಬೆಂಗಳೂರು: ಸದ್ಯ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ದೊಡ್ಮನೆಯಿಂದ ದೂರವಾಗಿದ್ದಾರೆ. ಸಿಕ್ಕ ಮಾಹಿತಿ ಪ್ರಕಾರ ಶ್ರೀದೇವಿ ಭೈರಪ್ಪ ಅವರು ವಿದೇಶದಲ್ಲಿ ಇದ್ದಾರೆ.

ಕಳೆದ 6 ತಿಂಗಳಿಂದ ದೊಡ್ಮನೆ ಕುಟುಂಬದಿಂದ ದೂರ ಉಳಿದಿರುವ ಶ್ರೀದೇವಿ ಭೈರಪ್ಪ ಅವರು ಯುವ ರಾಜ್‌ಕುಮಾರ್ ಜತೆ ಸಂಸಾರ ಮಾಡಿಕೊಂಡಿಲ್ಲ ಎನ್ನಲಾಗಿದೆ. ಒಂದು ವರ್ಷದಿಂದ ದಂಪತಿ ನಡುವೆ ಕಲಹ ಇತ್ತು. ಯುವ ರಾಜ್‌ಕುಮಾರ್ ಹಾಗು ಶ್ರೀದೇವಿ ದಾಂಪತ್ಯದಲ್ಲಿ ಮೂಡಿರುವ ಕಲಹವನ್ನು ಎರಡೂ ಕುಟುಂಬಗಳು ಪರಿಹರಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ.

ವಿಚ್ಚೇದನದ ವಿಷಯವಾಗಿ ಶ್ರೀದೇವಿ ಭೈರಪ್ಪಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಲೀಗಲ್ ನೋಟೀಸ್ ಗೆ ಉತ್ತರಿಸಿದ್ದೇನೆ.ವಿಚ್ಚೇದನದ ಅರ್ಜಿ ಇನ್ನೂ ತಲುಪಿಲ್ಲ. ನನಗೆ ವಿಚ್ಚೇದನದ ಅರ್ಜಿ ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ’ ಎಂದಿದ್ದಾರೆ. ‘ಏನಾಗಿದೆ ಎಂಬ ವಿಷಯ ಚಿತ್ರರಂಗ ಹಾಗು ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ವಿಚ್ಛೇದನದ ಅರ್ಜಿ ಇನ್ನೂ ನನ್ನ ತಲುಪಿಲ್ಲ. ನಾನು ಈಗಾಗಲೇ ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿಯು ಇನ್ನೂ ನನ್ನನ್ನು ತಲುಪಿಲ್ಲ. ನನಗೆ ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ’ ಎಂದಿದ್ದಾರೆ.

ಯುವ ರಾಜ್‌ಕುಮಾರ್ ಪತ್ನಿ ವಿರುದ್ಧ ಕ್ರೌರ್ಯದ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಡಿವೋರ್ಸ್ ಪಡೆದ ಸುದ್ದಿ ಇನ್ನೂ ಬಿಸಿಯಾಗಿರುವಾಗಲೇ ಚಂದನವನದಲ್ಲಿ ಮತ್ತೊಂದು ವಿಚ್ಛೇದನದ ಸುದ್ದಿ ಶಾಕ್‌ ನೀಡಿದೆ.