ತಾನು ಸುಂದರವಾಗಿ ಕಾಣಿಸಬೇಕೆನ್ನುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತೆ. ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಫಿಟ್ ಎಂಡ್ ಹಾಟ್ ಆಗಿ ಕಾಣಿಸಿಕೊಳ್ಳುವುದು ಈಗಿನ ಯುವಜನತೆಯ ಟ್ರೆಂಡ್ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಯುವತಿಯರಿಗೆ ಸೌಂದರ್ಯ ಪ್ರಜ್ಞೆ ಒಂದು ಕೈ ಹೆಚ್ಚೇ ಇರುತ್ತದೆ.
ಸೋಫಿಯಾ ಕ್ಲೆರಿಸಿ ಎನ್ನುವ ಮಾಡೆಲ್ ಕೂಡ ಇನ್ಸ್ಟಾಗ್ರಾಂ ನಲ್ಲಿ ತನ್ನ ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದಾಳೆ. ಈಕೆ ತಾನು ಸುಂದರವಾಗಿ ಮತ್ತು ಯಂಗ್ ಕಾಣಲು ಏನು ಮಾಡುತ್ತೇನೆ ಎನ್ನುವುದನ್ನು ಕೂಡ ಹೇಳಿದ್ದಾಳೆ. ಈಕೆಯ ಯೌವನದ ರಹಸ್ಯವನ್ನು ಕೇಳಿದ ಜನರು ದಂಗಾಗಿದ್ದಾರೆ.
ಹೌದು. . .ವಯಸ್ಸಾದರೂ ಚಿಕ್ಕವಳಂತೆ ಕಾಣಿಸಲು ನಾನು ನನ್ನ ರಕ್ತವನ್ನೇ ಕುಡಿಯುತ್ತೇನೆ ಎಂದು ಸೋಫಿಯಾ ಹೇಳಿಕೊಂಡಿದ್ದಾಳೆ. ಇನ್ಸ್ಟಾಗ್ರಾಂ ನಲ್ಲಿ ಈಕೆ ತನ್ನ ಡಿನ್ನರ್ ನ ಫೋಟೋಗಳನ್ನು ಹಂಚಿಕೊಂಡಿದ್ದಳು. ಆ ಫೋಟೋದಲ್ಲಿ ಕೆಂಪು ಬಣ್ಣದ ಪಾನೀಯ ಕೂಡ ಕಾಣಿಸುತ್ತಿತ್ತು. ಸೋಫಿಯಾ ಅಭಿಮಾನಿಯೊಬ್ಬರು ಈ ಪಾನೀಯದ ಕುರಿತು ಪ್ರಶ್ನೆ ಮಾಡಿದಾಗ ಸೋಫಿಯಾ ಅವರು ನೀಡಿದ ಉತ್ತರಕ್ಕೆ ಹಲವು ಮಂದಿ ಬೆಚ್ಚಿ ಬಿದ್ದಿದ್ದಾರೆ.
ಸೋಫಿಯಾ ಅವರು ಕೆಂಪು ಬಣ್ಣದ ಪಾನೀಯದ ಜೊತೆಗೆ, “ನಾನು ನನ್ನ ರಕ್ತವನ್ನು ತರುತ್ತೇನೆ ಮತ್ತು ಅವರು ಅದನ್ನು ಪಾನೀಯದಲ್ಲಿ ಬೆರೆಸಿ ನನಗೆ ಕೊಡುತ್ತಾರೆ” ಎನ್ನುವ ವಿಚಿತ್ರವಾದ ಶೀರ್ಷಿಕೆಯನ್ನು ಕೂಡ ಹಾಕಿದ್ದಾರೆ. ಇದರ ಜೊತೆಗೆ ಸೋಫಿಯಾ ಅವರು ತಮ್ಮ ಕಾಸ್ಮೆಟಿಕ್ಸ್ ಬ್ಯಾಗ್ ನಲ್ಲಿರುವ ರಕ್ತದ ಚಿಕ್ಕ ಟ್ಯೂಬ್ ತೋರಿಸಿದ ಅವರು ನನ್ನನ್ನು ಯಾರು ನಂಬುವುದಿಲ್ಲವೋ ಅವರು ಇದನ್ನು ನೋಡಿ ಎಂದು ಕೂಡ ಹೇಳಿದ್ದಾರೆ. ನನ್ನ ರೆಫ್ರಿಜರೇಟರ್ ನಲ್ಲಿ ಯಾವಾಗಲೂ ಒಂಬತ್ತು ಟ್ಯೂಬ್ ರಕ್ತ ಇರುತ್ತದೆ. ಪ್ರತಿವಾರ ನಾನು ಅದರಲ್ಲಿ ಕಾಲು ಭಾಗ ಅಥವಾ ಅರ್ಧ ಭಾಗವನ್ನು ತೆಗೆದುಕೊಳ್ಳುತ್ತೇನೆ ಎಂದು ಈ ಮಾಡೆಲ್ ಹೇಳಿದ್ದಾಳೆ. ಅದೇನು ಹುಚ್ಚೋ ಇವಳಿಗೆ ಆ ದೇವರೇ ಬಲ್ಲ.