ಸ್ಯಾಂಡಲ್‌ವುಡ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಇದೀಗ ಪುತ್ರ ಸಮರ್ಜಿತ್ ಲಂಕೇಶ್‌ರನ್ನು ಚಿತ್ರರಂಗಕ್ಕೆ ಗ್ರ್ಯಾಂಡ್‌ ಆಗಿ ಲಾಂಚ್ ಮಾಡುತ್ತಿದ್ದಾರೆ.

ಇದರ ನಡುವೆ ‘ಗೌರಿ’ ಸಿನಿಮಾದ ಹಾಡೊಂದಕ್ಕೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಜೊತೆ ಯುವ ನಟ ಸಮರ್ಜಿತ್ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಆವಿಷ್ಕಾರ ಮಾಡ್ತಾನೇ ಬಂದಿರುವ ಇಂದ್ರಜಿತ್ ತಮ್ಮ ಕನಸಿನ ‘ಗೌರಿ’ ಚಿತ್ರದ ‘ಲವ್ ಯೂ ಸಮಂತಾ’ ಹಾಡೊಂದನ್ನ ಬಿಡುಗಡೆ ಮಾಡಲು, ಶ್ರೇಯಾಂಕಾ ಪಾಟೀಲ್ ಅವರನ್ನ ಕರೆತಂದಿದ್ದರು.

ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೇಯಾಂಕಾ ಅವರಿಂದ ಹಾಡನ್ನ ಬಿಡುಗಡೆಗೊಳಿಸುವ ಮೂಲಕ ಯೂತ್ಸ್‌ಗೆ ಹುಚ್ಚೆಬ್ಬಿಸಿದ್ದಾರೆ.

ಇದು ಶ್ರೇಯಾಂಕಾಗೆ ಮೊದಲ ಸಿನಿಮಾ ಸಮಾರಂಭ. ಅದರಲ್ಲಿಯೂ ಕಣ್ಮುಂದೆ ಉತ್ಸಾಹಿ ಯುವಕ ಯುವತಿಯರ ಗುಂಪು ಇದ್ದಾಗ, ಉತ್ಸಾಹ ಇನ್ನೂ ಹೆಚ್ಚಾಗುತ್ತೆ. ಉತ್ಸಾಹದಿಂದ ಶ್ರೇಯಾಂಕಾ ಅವರು ಇಂದ್ರಜಿತ್ ಲಂಕೇಶ್ ಪುತ್ರನ ಸಮರ್ಜಿತ್ ಲಂಕೇಶ್ ಜೊತೆ ಶ್ರೇಯಾಂಕ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.