ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅಭಿನಯದ ಶಾಸ್ತ್ರಿ ಸಿನಿಮಾ ರೀ-ರಿಲೀಸ್ ಆಗಿದೆ. ರಾಜ್ಯದ ಕೆಲವೇ ಕೆಲವು ಥಿಯೇಟರ್‌ನಲ್ಲಿ ಈ ಶಾಸ್ತ್ರಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ದರ್ಶನ್ ಜೈಲಿನಲ್ಲಿ ಇರೋದಕ್ಕೂ ಈ ಚಿತ್ರ ರಿಲೀಸ್‌ಗೂ ಏನು ಸಂಬಂಧವೇ ಇಲ್ಲ ಬಿಡಿ.
ಇದನ್ನ ಚಿತ್ರದ ವಿತರಕರು ಈಗಾಗಲೆ ಕ್ಲಿಯರ್ ಆಗಿಯೇ ಹೇಳಿಕೊಂಡಿದ್ದಾರೆ. ಆದರೆ, ರೀ-ರಿಲೀಸ್ ವಿಚಾರಕ್ಕೆ ಬಂದ್ರೆ, ಇದು ಸದ್ಯದ ಟ್ರೆಂಡ್ ಅನ್ನೋ ಮಾಹಿತಿ ಕೂಡ ಬರುತ್ತದೆ. ಪುನೀತ್ ಅಭಿನಯದ ಜಾಕಿ ಚಿತ್ರದಿಂದಲೇ ಈ ಒಂದು ಟ್ರೆಂಡ್ ಕನ್ನಡದಲ್ಲಿ ಶುರು ಆಗಿದೆ. ಹಾಗೆ ಬ್ಯಾಕ್ ಟು ಬ್ಯಾಕ್ ಹಳೆ ಸಿನಿಮಾಗಳು ರಿಲೀಸ್ ಆಗಿದ್ದವು.
ಶಾಸ್ತ್ರಿ ಸಿನಿಮಾ ಮತ್ತೆ ರಿಲೀಸ್ ಆಗಿದೆ. ಇಂಡಿಯನ್-2 ಸಿನಿಮಾ ಎದುರೇ ಇದು ರಿಲೀಸ್ ಆಗಿದೆ. ಆದರೆ, ಕೆಲವೇ ಕೆಲವು ಥಿಯೇಟರ್‌ನಲ್ಲಿ ಬಂದಿದೆ. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಶಾಸ್ತ್ರಿ ಸಿನಿಮಾ ನೋಡೋ ಚಾನ್ಸ್ ಸಿಕ್ಕಿದೆ. ಈ ಚಿತ್ರವನ್ನ ಪಿ.ಎನ್.ಸತ್ಯಾ ಡೈರೆಕ್ಷನ್ ಮಾಡಿದ್ದರು. 2005 ರಲ್ಲಿಯೇ ಈ ಚಿತ್ರ ತೆರೆ ಕಂಡಿತ್ತು.
ದರ್ಶನ್ ಈ ಚಿತ್ರದಲ್ಲಿ ಎರಡು ರೀತಿಯ ಪಾತ್ರಗಳನ್ನ ಮಾಡಿದ್ದರು. ವೈದ್ಯಕೀಯ ವಿದ್ಯಾರ್ಥಿ ಆಗಿಯೇ ಮೊದಲು ಕಾಣಿಸಿಕೊಳ್ತಾರೆ. ಆ ಮೇಲೆ ಭೂಗತ ಲೋಕದಲ್ಲಿ ಶಾಸ್ತ್ರಿ ಆಗಿಯೇ ಅಬ್ಬರಿಸುತ್ತಾರೆ. ಈ ಎರಡು ರೀತಿಯ ಪಾತ್ರಗಳಲ್ಲಿ ದರ್ಶನ್ ಸಖತ್ ಆಗಿಯೇ ಮಿಂಚಿದ್ದರು.
ಹಾಗೆ ಈ ಚಿತ್ರದಲ್ಲಿ ಒಂದು ಲವ್ ಸ್ಟೋರಿ ಇತ್ತು. ಈ ಲವ್ ಸ್ಟೋರಿಗೆ ನಟಿ ಮಾನ್ಯ ಪ್ರಮುಖ ಆಕರ್ಷಣೆ ಆಗಿದ್ದರು. ಕನಕಾ ಅನ್ನುವ ಶ್ರೀಮಂತನ ಮಗಳಾಗಿಯೇ ಕಾಣಿಸಿಕೊಂಡಿದ್ದರು. ಶಾಸ್ತ್ರಿ ಜೊತೆಗೆ ಲವ್ ನಲ್ಲಿ ಬಿದ್ದು, ರಿಜೆಕ್ಟ್ ಆಗೋ ಕಥೆ ಕೂಡ ಇದರಲ್ಲಿತ್ತು. ಶಾಸ್ತ್ರಿ ಸಿನಿಮಾಕ್ಕೆ ಸಾಧು ಕೋಕಿಲ ಸಂಗೀತ ಕೊಟ್ಟಿದ್ದರು.

