News Karnataka Kannada
Friday, May 03 2024
ಮನರಂಜನೆ

ಮಗಳ ಜೊತೆ ಸಿನೆಮಾ ಮಾಡಲು ನೋ ಎಂದ ಶಾರುಖ್ ಖಾನ್

ಶಾರುಖ್ ಖಾನ್  ಅವರು ಮಗಳು ಸಹಾನಾ ಜೊತೆ ಸಿನಿಮಾ ಮಾಡುತ್ತಾರೆ ಎಂಬ ಮಾತು ಇಡೀ ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿತ್ತು. ತಂದೆ-ಮಗಳನ್ನು ಒಟ್ಟಿಗೆ ತೆರೆ ಮೇಲೆ ನೋಡೋ ಅವಕಾಶ ಸಿಗಲಿದೆ ಎಂದು ಫ್ಯಾನ್ಸ್ ಖುಷಿಪಟ್ಟಿದ್ದರು. ಆದರೆ, ಇದಕ್ಕೆ ಶಾರುಖ್ ಖಾನ್ ಅವಕಾಶ ನೀಡುತ್ತಿಲ್ಲ. ಮಗಳ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ಶಾರುಖ್ ಖಾನ್ ಹೇಳಿದ್ದಾರೆ. 
Photo Credit : News Kannada

ಮುಂಬೈ: ಶಾರುಖ್ ಖಾನ್  ಅವರು ಮಗಳು ಸುಹಾನಾ ಖಾನ್ ಜೊತೆ ಸಿನಿಮಾ ಮಾಡುತ್ತಾರೆ ಎಂಬ ಮಾತು ಇಡೀ ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿತ್ತು. ತಂದೆ-ಮಗಳನ್ನು ಒಟ್ಟಿಗೆ ತೆರೆ ಮೇಲೆ ನೋಡೋ ಅವಕಾಶ ಸಿಗಲಿದೆ ಎಂದು ಫ್ಯಾನ್ಸ್ ಖುಷಿಪಟ್ಟಿದ್ದರು. ಆದರೆ, ಇದಕ್ಕೆ ಶಾರುಖ್ ಖಾನ್ ಅವಕಾಶ ನೀಡುತ್ತಿಲ್ಲ. ಮಗಳ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ಶಾರುಖ್ ಖಾನ್ ಹೇಳಿದ್ದಾರೆ.

ಸುಹಾನಾ ಖಾನ್ ಈಗಾಗಲೇ ನಟನೆಗೆ ಕಾಲಿಟ್ಟಿದ್ದಾರೆ. ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಣ್ಣದ ಬದುಕು ಶುರು ಮಾಡಿದ್ದಾರೆ.

ಸುಜಯ್ ಘೋಷ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಒಟ್ಟಾಗಿ ಕೆಲಸ ಮಾಡಬೇಕಿತ್ತು. ಇಬ್ಬರೂ ತಂದೆ ಮಗಳ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಚಿತ್ರವನ್ನು ಆರಂಭಿಸಲು ಶಾರುಖ್ ಖಾನ್  ಗ್ರೀನ್ ಸಿಗ್ನಲ್ ನೀಡಿಲ್ಲ.

ಈಗಾಗಲೇ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ನಟನೆಯನ್ನು ಟೀಕೆ ಮಾಡಲಾಗಿದೆ. ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡರೆ ಸಹಜವಾಗಿಯೇ ಫ್ಯಾನ್ಸ್ ಹೋಲಿಕೆ ಮಾಡುತ್ತಾರೆ. ಈ ರೀತಿ ಆಗೋದು ಶಾರುಖ್​ ಅವರಿಗೆ ಇಷ್ಟ ಇಲ್ಲ. ಈ ಕಾರಣಕ್ಕೆ ಅವರು ಮಗಳ ಜೊತೆ ಸಿನಿಮಾ ಮಾಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು