ಮುಂಬೈ: ಬಾಲಿವುಡ್‌ ಕಿಂಗ್ ಶಾರುಖ್ ಖಾನ್​ಗೆ ಪಾರ್ಡೊ ಅಲ್ಲಾ ಕ್ಯಾರಿಯರಾ ಅಸ್ಕೋನಾ-ಲೊಕಾರ್ನೊ ಪ್ರವಾಸೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶನಿವಾರ (ಆಗಸ್ಟ್ 10 ರಂದು) ನಡೆದ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಶಾರುಖ್ ಖಾನ್​​ಗೆ ಈ ಗೌರವ ನೀಡಲಾಗಿದೆ.

ಪ್ರಶಸ್ತಿ ಸಮಾರಂಭದಲ್ಲಿನ ಶಾರುಖ್ ಖಾನ್ ಅವರ ಫೋಟೋಗಳು ಮತ್ತು ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಇದೀಗ ನಟ ರೆಡ್‌ ಕಾರ್ಪೆಟ್‌ ಮೇಲೆ ಪೋಸ್‌ ನೀಡುವಾಗ ಅಡ್ಡ ಬಂದ ಹಿರಿಯ ವ್ಯಕ್ತಿಯನ್ನು ತಳ್ಳಿದ್ದಾರೆ. ಹೀಗಾಗಿ ನಟ ಭಾರಿ ಟ್ರೋಲ್‌ ಆಗಿದ್ದಾರೆ. ನೆಟ್ಟಿಗರು ನಟನ ನಡವಳಿಕೆಗೆ ಖಂಡಿಸಿದ್ದಾರೆ. ಅತ್ಯಂತ ‘ಸೊಕ್ಕಿನ’ ಮತ್ತು ‘ಅಸಭ್ಯ’ ವ್ಯಕ್ತಿ ಎಂದು ಲೇಬಲ್ ಕೊಟ್ಟಿದ್ದಾರೆ. ಶಾರುಖ್ ಒಳ್ಳೆಯ ವ್ಯಕ್ತಿಯಲ್ಲ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

— ℣ (@Vamp_Combatant) August 10, 2024