News Karnataka Kannada
Friday, May 03 2024
ಮನರಂಜನೆ

ಮಗನಿಗಾಗಿ ಶರ್ಟ್​ಲೆಸ್ ಅವತಾರದಲ್ಲಿ ಫೋಟೋಗೆ ಪೋಸ್ ಕೊಟ್ಟ ಶಾರುಖ್ ಖಾನ್ 

ನಟ ಶಾರುಖ್ ಖಾನ್  ಸಿನಿಮಾದ ಜೊತೆಗೆ ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇದೀಗ ಮಗ ಆರ್ಯನ್​ ಖಾನ್ ಒಡೆತನದ ಬಟ್ಟೆ ಬ್ರ್ಯಾಂಡ್ ಕೂಡ ಪ್ರಚಾರ ಮಾಡುತ್ತಿದ್ದಾರೆ.
Photo Credit : News Kannada

ಮುಂಬೈ:  ನಟ ಶಾರುಖ್ ಖಾನ್  ಸಿನಿಮಾದ ಜೊತೆಗೆ ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇದೀಗ ಮಗ ಆರ್ಯನ್​ ಖಾನ್ ಒಡೆತನದ ಬಟ್ಟೆ ಬ್ರ್ಯಾಂಡ್ ಕೂಡ ಪ್ರಚಾರ ಮಾಡುತ್ತಿದ್ದಾರೆ.

ತಮ್ಮದೇ ಬಟ್ಟೆ ಬ್ರ್ಯಾಂಡ್ ಆರಂಭಿಸಿರೋ ಆರ್ಯನ್ ಖಾನ್, ಇದರ ಪ್ರಚಾರಕ್ಕೆ ತಂದೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಬ್ರ್ಯಾಂಡ್ ಪ್ರಚಾರಕ್ಕೆ ಯಾವುದೇ ಹಣ ಪಡೆಯದ ಶಾರುಖ್ ಖಾನ್,  ಈಗ ಅವರು ಮಗನಿಗಾಗಿ ಶರ್ಟ್​ಲೆಸ್ ಅವತಾರ ತಾಳಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಶಾರುಖ್ ಖಾನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಶರ್ಟ್​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅವರು ತಮ್ಮ ಮಗನ ಬಟ್ಟೆ ಬ್ರ್ಯಾಂಡ್​ನ ಟ್ಯಾಗ್ ಮಾಡಿದ್ದಾರೆ. ಈ ಫೋಟೋ 20 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ತಂದೆಯ ಬೆಂಬಲ ನೋಡಿ ಆರ್ಯನ್ ಖುಷಿಪಟ್ಟಿದ್ದಾರೆ.

ಆರ್ಯನ್ ಖಾನ್ ಬಟ್ಟೆ ಬ್ರ್ಯಾಂಡ್ ಸಖತ್ ದುಬಾರಿ. ಈ ಬಗ್ಗೆ ಅನೇಕರು ತಕರಾರು ತೆಗೆದಿದ್ದಾರೆ. ‘Ask SRK’ ವೇಳೆ ಶಾರುಖ್ ಖಾನ್ ಅವರಿಗೂ ಈ ಬಗ್ಗೆ ದೂರು ನೀಡಲಾಗಿತ್ತು. ‘ಆರ್ಯನ್​ ನನಗೂ ಡಿಸ್ಕೌಂಟ್ ನೀಡುವುದಿಲ್ಲ’ ಎಂದು ಹೇಳುವ ಮೂಲಕ ಶಾರುಖ್ ಖಾನ್ ಎಲ್ಲರ ಬಾಯಿ ಮುಚ್ಚಿಸಿದ್ದರು.

ಒಂದು ಜಾಕೆಟ್​ಗೆ ಲಕ್ಷಾಂತರ ರೂಪಾಯಿ ಪಾವತಿಸಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು