ಕೋಲ್ಕತ್ತಾ: ಸಿನಿಮಾ ಸೆಟ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಾಳಿ ನಿರ್ದೇಶಕ ಅರಿಂದಮ್ ಸಿಲ್ ಅವರನ್ನು  ನಿರ್ದೇಶಕರ ಸಂಘದಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ.

ಕೆಲ ತಿಂಗಳ ಹಿಂದೆ ಅರಿಂದಮ್ ಸಿಲ್ ತನ್ನ ಸಿನಿಮಾ ಸೆಟ್‌ನಲ್ಲಿ ಅನುಚಿತವಾಗಿ ವರ್ತಿಸಿದ್ದರು. ಸೀನ್‌ ವೊಂದನ್ನು ವಿವರಿಸುವಾಗ ಅವರು ಕೆನ್ನೆಗೆ ಮುತ್ತು ನೀಡಿದ್ದರು ಎಂದು ಮಹಿಳಾ ಕಲಾವಿದರೊಬ್ಬರು ಆರೋಪಿಸಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಸಿಲ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದಾದ ನಂತರ ನಿರ್ದೇಶಕ ಸಿಲ್‌ ಅವರು, “ನನ್ನ ನಡವಳಿಕೆಯಿಂದ ನಟಿಗೆ ಅವಮಾನವಾಗಿದ್ದರೆ, ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದರು.