ಕೊಚ್ಚಿ: ಮಲಯಾಳಂನ ಬೆಂಗಳೂರು ಡೇಸ್, ಪ್ರೇಮಂ ಮೊದಲಾದ ಹಿಟ್ ಸಿನೆಮಾಗಳ ನಾಯಕ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ.

ಸಿನೆಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಂಬಿಸಿ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಎರ್ನಾಕುಳಂ ಜಿಲ್ಲೆಯ ನೇರ್ಯಮಂಗಲಂ ನಿವಾಸಿ ಯುವತಿ ಊನ್ನುಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಈ ಪ್ರಕರಣ ಎಸ್‌ಐಟಿಗೆ ವರ್ಗಾವಣೆಯಾಗಿದೆ. ಹೇಮಾ ಕಮಿಷನ್ ವರದಿ ಬಹಿರಂಗಗೊಂಡ ಬಳಿಕ ತನಿಖೆಗೆ ನೇಮಕಗೊಂಡ ವಿಶೇಷ ತನಿಖಾ ತಂಡ ಈ ಪ್ರಕರಣದ ವಿಚಾರಣೆ ನಡೆಸಲಿದೆ. ವರದಿ ಬಹಿರಂಗವಾದ ಬಳಿಕ ಇದುವರೆಗೆ 11 ಪ್ರಕರಣ ದಾಖಲಾಗಿದೆ. ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ನಿವಿನ್ ಪೌಲಿ 6ನೇ ಆರೋಪಿಯಾಗಿದ್ದಾರೆ.