‘ಕಾಂತಾರ’ ಸಿನಿಮಾ ನಾಯಕಿ ಸಪ್ತಮಿ ಗೌಡ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬಿಗ್ಬಾಸ್ಗೆ ಸಪ್ತಮಿ ಗೌಡ ಬಂದಿದ್ದರು. ಮುಟ್ಟಿನ ಕಪ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಪ್ತಮಿ ಗೌಡ, ಅದೇ ಕಾರ್ಯಕ್ಕಾಗಿ ಬಿಗ್ಬಾಸ್ ಮನೆಗೆ ಬಂದು ಮುಟ್ಟಿನ ಕಪ್ ಬಗ್ಗೆ ಜಾಗೃತಿ ಮೂಡಿಸಿದ್ದರು.
ಇದೀಗ ಮತ್ತೊಮ್ಮೆ ಸಪ್ತಮಿ ಗೌಡ ಕಿರುತೆರೆಗೆ ಬರಲಿದ್ದಾರೆ. ಕೆಲವು ದಿನಗಳ ಹಿಂದೆಯೇ ‘ಜೀ ಕನ್ನಡ’ಕ್ಕಾಗಿ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಪ್ತಮಿ ಗೌಡ, ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಗಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯ ಪ್ರೊಮೋಟರ್ ರೀತಿ ಸಪ್ತಮಿ ಗೌಡ, ಧಾರಾವಾಹಿ ಬಗ್ಗೆ ಕಾಮೆಂಟ್ರಿ ಮಾಡಿದ್ದಾರೆ.