ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅವರಿಗೆ ಇಂದು (ಜುಲೈ 29) ಜನ್ಮದಿನದ ಸಡಗರ. ಅವರ ಅಭಿಮಾನಿಗಳು ಸೇರಿದಂತೆ ಹಿರಿಯ ಹಾಗೂ ಯುವ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
1971ರಲ್ಲಿ ತೆರೆಕಂಡ ‘ರೇಷ್ಮಾ ಔರ್ ಶೇರಾ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು 1981 ರಲ್ಲಿ ‘ರಾಕಿ’ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡರು.
ಬಳಿಕ ‘ಜಾನಿ ಐ ಲವ್ ಯು’ ನಲ್ಲಿ ತೆರೆ ಹಂಚಿಕೊಂಡರು.
ನಟ ಸಂಜಯ್ ದತ್ ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರ ಹಾಗೂ ಖಳನಾಯಕನಾಗಿ ಮಿಂಚುತ್ತಿದ್ದಾರೆ. ‘ಕೆಜಿಎಫ್ ಚಾಪ್ಟರ್ 2’ ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಳೆದ ವರ್ಷ ತಮಿಳಿನ ‘ಲಿಯೋ’ ದಲ್ಲಿ ತೆರೆ ಹಂಚಿಕೊಂಡಿದ್ದ ಸಂಜಯ್ ದತ್ ಇತ್ತೀಚಿಗೆ ತೆಲುಗಿನ ‘ಡಬಲ್ iSmart’ ಹಾಗೂ ಕನ್ನಡದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಕೇಡಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇಂದು ‘ಕೇಡಿ’ ಚಿತ್ರತಂಡ ಸಂಜಯ್ ದತ್ ಅವರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅವರ ಪಾತ್ರವನ್ನು ಪರಿಚಯಿಸಿದ್ದು,’ಢಾಕ್ ದೇವ’ನ ಪಾತ್ರದಲ್ಲಿ ನಟಿಸಲಿದ್ದಾರೆ.

