ಸಿನಿಮಾಗಳ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಟಿ ಸಂಯುಕ್ತ ಹೊರನಾಡು . ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿ ಪ್ರಿಯರ ಮೆಚ್ಚುಗೆ ಪಡೆದವರು ಈ ನಟಿ.ಸಂಯುಕ್ತ ಹೊರನಾಡು ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.

28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ದತ್ತು ಪಡೆದಿದ್ದಾರೆ. ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಕಷ್ಟ ಸಾಧ್ಯವಾಗಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರ ಕಾಳಜಿ ವಹಿಸಲಾಗುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಪಶು ಚಿಕಿತ್ಸಾವನ್ನು ಭರಿಸಲಾಗುತ್ತದೆ. ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೈ ಬನ್ನೇರುಘಟ್ಟ ಜೈವಿಕ‌ ಉದ್ಯಾನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ CSR ಮೂಲ ಉದ್ದೇಶ ಎಂದರು