ಮುಂಬೈನಲ್ಲಿ ಇತ್ತೀಚೆಗೆ ಅನಂತ್​ ಅಂಬಾನಿಯ ಮದುವೆ ಬಹಳ ವೈಭವದಿಂದ ನಡೆಯಿತು. ನಟ ಸಲ್ಮಾನ್​ ಖಾನ್​ ಅವರು ಈ ಮದುವೆಗೆ ಹಾಜರಿ ಹಾಕಿದ್ದರು. ಅವರ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದರಲ್ಲಿ ಅವರು ವಿದೇಶಿ ಬೆಡಗಿ ಕಿಮ್​ ಕರ್ದಾಶಿಯಾನ್​ ಅವರನ್ನು ಕಣ್ಣರಳಿಸಿ ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ಅದನ್ನು ನೋಡಿ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅಮೆರಿಕದಲ್ಲಿ ಕಿಮ್​ ಕರ್ದಾಶಿಯಾನ್​ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಹೊಂದಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಹಾಟ್​ ಆದಂತಹ ಅವತಾರದಲ್ಲಿ ಬಟ್ಟೆ ಧರಿಸುವ ಮೂಲಕ ಅವರು ಆಗಾಗ ಸುದ್ದಿ ಆಗುತ್ತಾರೆ. ಅನಂತ್​ ಅಂಬಾನಿಯ ಮದುವೆಗೂ ಅವರು ಬೋಲ್ಡ್​ ಆಗಿ ಡ್ರೆಸ್ ಮಾಡಿಕೊಂಡು ಬಂದಿದ್ದರು. ಈ ವೇಳೆ ಅವರನ್ನು ಸಲ್ಮಾನ್​ ಖಾನ್​ ದಿಟ್ಟಿಸಿ ನೋಡಿದ್ದಾರೆ.

ರಾಧಿಕಾ ಮರ್ಚೆಂಟ್​ ಹಾಗೂ ಅನಂತ್​ ಅಂಬಾನಿ ಮದುವೆಗೆ ವಿದೇಶದ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ಈ ಸಮಾರಂಭದಲ್ಲಿ ಕಿಮ್​ ಕರ್ದಾಶಿಯಾನ್​ ಅವರು ಖುಷಿ ಖುಷಿಯಿಂದ ಓಡಾಡಿಕೊಂಡಿದ್ದರು. ಅವರನ್ನು ಸಲ್ಲು ನೋಡಿರುವ ಈ ದೃಶ್ಯ ಮಾತ್ರ ಸಖತ್‌ ವೈರಲ್‌ ಆಗ್ತಿದೆ.

https://x.com/iPiyush_agr/status/1815089160862278077