ಪ್ಯಾನ್ ಇಂಡಿಯಾದಲ್ಲಿ ಸಲಾರ್ ಸಂಭ್ರಮ ಮುಗಿಲು ಮುಟ್ಟಿದೆ. ಇಂದು ಐದು ಭಾಷೆಯಲ್ಲಿ ರಿಲೀಸ್ ಆಗಿರುವ ಸಲಾರ್ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಹೊಂಬಾಳೆ ನಿರ್ಮಾಣದ ಮತ್ತೊಂದು ಹೈ ಬಜೆಟ್ ಚಿತ್ರ ಇದಾಗಿದ್ದು, 270 ಕೋಟಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಗಣ್ಯರು ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದು, ರವಿ ಬಸ್ರೂರು ಮ್ಯೂಸಿಕ್ ಚಿತ್ರದಲ್ಲಿ ಮೋಡಿ ಮಾಡಿದೆ. ಇನ್ನು, ಸಲಾರ್ ಸಿನಿಮಾ ನೋಡಿದ ಸಿನಿ ಪ್ರೇಮಿಗಳಂತು ಫುಲ್ ಫಿದಾ ಆಗಿದ್ದಾರೆ.
ಕನ್ನಡಿಗರು ಸಹ ಚಿತ್ರವನ್ನು ಮೆಚ್ಚಿಕೊಂಡಿದ್ದು, ಇದು ಉಗ್ರಂ ರಿಮೇಕ್ ಅಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಉಗ್ರಂಗೂ ಮತ್ತು ಸಲಾರ್ಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಂಪೂರ್ಣ ಭಿನ್ನ ಕಥೆಯುಳ್ಳ ಸಿನಿಮಾ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಲಾರ್ ಚಿತ್ರದ ಮೀಮ್ಸ್, ಥಿಯೇಟರ್ ಮುಂದೆ ಸೇರಿರುವ ಜನರ ವಿಡಿಯೋಗಳು ವೈರಲ್ ಆಗುತ್ತಿವೆ. ಬಾಹುಬಲಿ ಬಳಿಕ ಪ್ರಭಾಸ್ಗೆ ಇದೊಂದು ಒಳ್ಳೆಯ ಕಮ್ ಬ್ಯಾಕ್ ಸಿನಿಮಾ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಈ ಮೂಲಕ ಕೆಜಿಎಫ್ ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಪ್ರಶಾಂತ್ ನೀಲ್ ಸಕ್ಸಸ್ ಆಗಿದ್ದಾರೆ.