ಬೆಂಗಳೂರು: ʼಕಾಂತಾರʼ ಬೆಡಗಿ ರುಕ್ಮಿಣಿ ವಸಂತ್‌ ಅವರ ನಕಲಿ ಬಿಕಿನಿ ವಿಡಿಯೋ ಮತ್ತು ಫೋಟೋಸ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಕುರಿತು ಎಫ್‌ಐಆರ್‌ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋಸ್‌ಗಳನ್ನು ವೈರಲ್‌ ಮಾಡಿದವರ ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಟಿಯ ದೂರಿನ ಹಿನ್ನೆಲೆ ಪೊಲೀಸರು ಈ ಕುರಿತು ದೂರು ದಾಖಲಿಸಿದ್ದಾರೆ. ಒಟ್ಟು 29 ಸೋಶಿಯಲ್‌ ಮೀಡಿಯಾ ಖಾತೆಗಳ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದರಲ್ಲಿ 9 ಇನ್‌ಸ್ಟಾಗ್ರಾಮ್ ಅಕೌಂಟ್‌ಗಳು, 14 ಟ್ವಿಟರ್ ಅಕೌಂಟ್‌ಗಳು ಹಾಗೂ 6 ಫೇಸ್‌ಬುಕ್ ಪೇಜ್‌ಗಳು ಸೇರಿವೆ.

ಸೈಬರ್ ಪೊಲೀಸರು ಐಟಿ ಆ್ಯಕ್ಟ್ 66C, 66D ಹಾಗೂ ಬಿಎನ್‌ಎಸ್ (BNS) ಸೆಕ್ಷನ್ 75(3), 79, 336, 356, 351, 352 ಮತ್ತು 294ರ ಅಡಿಯಲ್ಲಿ ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಿಡಿಗೇಡಿಗಳ ಬಂಧನವಾಗುವ ಸಾಧ್ಯತೆಯಿದೆ.