ಹಾಲಿವುಡ್ನ ಸೂಪರ್ ಹೀರೋ ಯೂನಿವರ್ಸ್ನಲ್ಲಿ ಸೂಪರ್ ಮ್ಯಾನ್, ಥಾರ್, ಹಲ್ಕ್, ಡೆಡ್ಪೂಲ್, ವೋಲ್ವರಿನ್ ಇನ್ನೂ ಹಲವರು ಅಗೋಚರ ಶಕ್ತಿಗಳಿಂದ ಅಥವಾ ಯಾವುದಾದರೂ ವೈಜ್ಞಾನಿಕ ಪ್ರಯೋಗದಿಂದ ಶಕ್ತಿ ಪಡೆದು ಸೂಪರ್ ಹೀರೋ ಆದವರು ಆದರೆ ಐರನ್ ಮ್ಯಾನ್ ಮಾತ್ರ ತನ್ನ ಬುದ್ಧಿ ಶಕ್ತಿ, ಶ್ರಮ ಬಳಸಿ ಸೂಪರ್ ಹೀರೋ ಆದವ. ಐರನ್ ಮ್ಯಾನ್ ಮೇಲೆ ಜನರಿಗೆ ವಿಶೇಷ ಪ್ರೀತಿ.
ಸೂಪರ್ ಮ್ಯಾನ್ಗಿಂತಲೂ ಹೆಚ್ಚು ಅಭಿಮಾನಿಗಳಿರುವ ಸೂಪರ್ ಹೀರೋ ಐರನ್ ಮ್ಯಾನ್. ಇದಕ್ಕೆ ಮುಖ್ಯ ಕಾರಣ ಐರನ್ ಮ್ಯಾನ್ ಪಾತ್ರದಲ್ಲಿ ನಟಿಸುತ್ತ ಬಂದಿರುವ ನಟ ರಾಬರ್ಟ್ ಡೌನಿ ಜೂನಿಯರ್. ಆದರೆ ಕೆಲ ವರ್ಷಗಳ ಹಿಂದೆ ಐರನ್ ಮ್ಯಾನ್ ಪಾತ್ರವನ್ನು ಎಂಸಿಯು ಅಂತ್ಯಗೊಳಿಸಿತ್ತು. ರಾಬರ್ಟ್ ಡೌನಿ ಜೂನಿಯರ್ ಸಹ ತಾವಿನ್ನು ಐರನ್ ಮ್ಯಾನ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು. ಆದರೆ ಈಗ ‘ಐರನ್ ಮ್ಯಾನ್’ ಮರಳಿ ಬಂದಿದ್ದಾನೆ ಆದರೆ ಬೇರೆ ಮುಖವಾಡದ ಮೂಲಕ.
ಎಂಸಿಯು ‘ಅವೇಂಜರ್ಸ್: ಡೂಮ್ಸ್ಡೇ’ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾ ಜನಪ್ರಿಯ ಕಾಮಿಕ್ ವಿಲನ್ ಡೂಮ್ಸ್ಡೇ ಕುರಿತಾಗಿ ಇದೆ. ಈ ಸಿನಿಮಾದಲ್ಲಿ ವಿಲನ್ ಡೂಮ್ಸ್ ಡೇ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ನಟಿಸಲಿದ್ದಾರೆ. ನಿನ್ನೆಯಷ್ಟೆ ಇದರ ಘೋಷಣೆ ಆಗಿದೆ ಅದೂ ಆಶ್ಚರ್ಯಕರ ರೀತಿಯಲ್ಲಿ. ‘ಅವೇಂಜರ್ಸ್’ ಸಿನಿಮಾದ ಘೋಷಣೆಗೆ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹಲವರು ಡೂಮ್ಸ್ಡೇ ರೀತಿಯ ಮುಸುಕು ತೊಟ್ಟು ನಿಂತಿದ್ದರು. ಅದರಲ್ಲಿ ರಾಬರ್ಟ್ ಡೌನಿ ಜೂನಿಯರ್ ಸಹ ಇದ್ದರು. ಒಮ್ಮೆಲೆ ರಾಬರ್ಟ್ ಡೌನಿ ಜೂನಿಯರ್ ತಮ್ಮ ಮುಖವಾಡ ತೆರೆದಾಗ ಎದುರಿದ್ದ ಜನರಿಗೆ ಆಶ್ಚರ್ಯವಾಯಿತು. ಜನ ಖುಷಿಯಲ್ಲಿ ಕೂಗಾಡಿದರು. ‘ನನಗೆ ಸಂಕೀರ್ಣವಾಗಿರುವ ಪಾತ್ರಗಳಲ್ಲಿ ನಟಿಸುವುದು ಇಷ್ಟ’ ಎಂದು ರಾಬರ್ಟ್ ಹೇಳಿದ್ದಾರೆ.
11 ವರ್ಷಗಳಲ್ಲಿ ರಾಬರ್ಟ್ ಡೌನಿ ಜೂನಿಯರ್ ‘ಐರನ್ ಮ್ಯಾನ್’, ‘ಐರನ್ ಮ್ಯಾನ್ 2’, ‘ಐರನ್ ಮ್ಯಾನ್ 3’, ನಾಲ್ಕು ಅವೇಂಜರ್ಸ್ ಸಿನಿಮಾ, ಸ್ಪೈಡರ್ ಮ್ಯಾನ್, ಇಂಕ್ಕ್ರೆಡಿಬಲ್ ಹಲ್ಕ್, ಕ್ಯಾಪ್ಟನ್ ಅಮೆರಿಕ ಸಿವಿಲ್ ವಾರ್’ ಒಟ್ಟು 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲ ಸಿನಿಮಾದಲ್ಲಿಯೂ ಐರನ್ ಮ್ಯಾನ್ ಆಗಿಯೇ ನಟಿಸಿದ್ದಾರೆ

