ಮುಂಬೈ: ಬಾಲಿವುಡ್ನ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಜೆನಿಲಿಯಾ ಡಿಸೋಜಾ ಹಾಗು ರಿತೇಷ್ ದೇಶ್ಮುಖ್ ಕೂಡ ಒಬ್ಬರು. ಇಬ್ಬರೂ ಪ್ರೀತಿಸಿ ಮದುವೆ ಆದವರು. ಈ ಸೆಲೆಬ್ರಿಟಿ ಜೋಡಿ ಅಂಗಾಗ ದಾನ ಮಾಡುವ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ದಂಪತಿಗೆ ಧನ್ಯವಾದ ಹೇಳಿದೆ. ರಿತೇಷ್ ಅವರ ವಿಡಿಯೋನ ಇವರು ಪೋಸ್ಟ್ ಮಾಡಿದ್ದಾರೆ.
ಬದುಕಿದ್ದಾಗಲೇ ಅಂಗಾಗ ದಾನಕ್ಕೆ ಸಹಿ ಹಾಕಬೇಕು. ಈ ರೀತಿ ಸಹಿ ಹಾಕಿದ ವ್ಯಕ್ತಿ ನಿಧನ ಹೊಂದಿದ ಬಳಿಕ ಕಣ್ಣು ಮೊದಲಾದ ಅಂಗಾಗಳನ್ನು ಪಡೆಯಲಾಗುತ್ತದೆ. ಇದನ್ನು ಅಗತ್ಯ ಇರೋ ವ್ಯಕ್ತಿಗಳಿಗೆ ನೀಡಲಾಗುತ್ತದೆ. ರಿತೇಷ್ ಹಾಗೂ ಜೆನಿಲಿಯಾ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಮೊದಲು ರಿತೇಷ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ನಾನು ಹಾಗೂ ಜೆನಿಲಿಯಾ ನಮ್ಮ ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇವೆ’ ಎಂದು ರಿತೇಷ್ ಹೇಳಿದ್ದರು. ಈ ವಿಚಾರವನ್ನು ಜೆನಿಲಿಯಾ ಕೂಡ ಖಚಿತಪಡಿಸಿದ್ದರು. ಈ ವಿಡಿಯೋನ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಹಂಚಿಕೊಂಡಿದೆ. ‘ರಿತೇಷ್ ಹಾಗೂ ಜೆನಿಲಿಯಾ ದಂಪತಿಗೆ ಧನ್ಯವಾದಗಳು. ಅವರು ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಇವರ ನಿರ್ಧಾರ ಅನೇಕರಿಗೆ ಸ್ಫೂರ್ತಿದಾಯಕವಾಗಲಿ’ ಎಂದು ಬರೆಯಲಾಗಿದೆ.
Thanks to Riteish Deshmukh & Genelia, the Bollywood star couple for pledging to donate their organs during the ongoing organ donation month of July. Their gesture will motivate others also to connect with the noble cause.#organdonation #Bollywood #savelives pic.twitter.com/lJ1Yiyaj1o
— NOTTO (@NottoIndia) July 6, 2024

