ಉಡುಪಿ: ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತ ರಿಲ್ಯಾಕ್ಸ್ ಮೂಡ್ ನಲ್ಲಿರುವ ಫೊಟೊ, ವಿಡಿಯೋ ವೈರಲ್ ಆಗುತ್ತಿದೆ. ಅವರು ಕುಟುಂಬ ಸದಸ್ಯರ ಜೊತೆ ಸಾಲಿಗ್ರಾಮದ ಕಯಾಕಿಂಗ್ ಪಾಯಿಂಟ್ ಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.
Whatsapp Image 2024 09 23 At 4.23.40 Pm
ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಯಾಕಿಂಗ್ ಪಾಯಿಂಟ್ ಬಹಳ ಪ್ರಸಿದ್ಧಿ ಪಡೆದಿದೆ. ಕಯಾಕಿಂಗ್ ಸೆಂಟರ್ ನಲ್ಲಿ ಕಯಾಕಿಂಗ್ ಮಾಡುತ್ತಾ, ಕಾಂಡ್ಲಾವನದಲ್ಲಿ ವಿಹಾರ ನಡೆಸಿದರು. ಪತ್ನಿ ಪ್ರಗತಿ, ಮಗ, ಮಗಳು ಮತ್ತು ಅತ್ತೆಯ ಜೊತೆಗೆ ಕಯಾಕಿಂಗ್ ನಡೆಸಿದ ರಿಷಬ್ ಅವರು, ಕೆಲಹೊತ್ತು ಇಲ್ಲಿ ಕಾಲ ಕಳೆದರು. ಅಂದಹಾಗೆ ಅವರು ಕಾಂತಾರ ಪ್ರಿಸ್ಟೇಲ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ.ಬ್ಯುಸಿ ಶೆಡ್ಯೂಲ್ ಮಧ್ಯದಲ್ಲೇ ಕುಟುಂಬದ ಜೊತೆ ವಿಹಾರ ಮಾಡಿ ಗಮನ ಸೆಳೆದಿದ್ದಾರೆ