ಮಂಗಳೂರು: ನಡುರಾತ್ರಿ ಪಂಜುರ್ಲಿ ನೇಮಕ್ಕೆ ಬಂದು ರಿಷಬ್ ಶೆಟ್ಟಿ ಬೇಡಿಕೊಂಡಿದ್ದಾರೆ. ಬೆಳಗಿನ ವರೆಗೂ ದೈವದ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡರು.

ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ದೈವದಲ್ಲಿ ರಿಷಬ್ ಶೆಟ್ಟಿ ಕಷ್ಟ ಹೇಳಿಕೊಂಡಿದ್ದಾರೆ. ‘ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್ ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ’ ‘ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ’ ಮಂಗಳೂರಿನಲ್ಲಿ ಕೈಮುಗಿದು ಬೇಡಿಕೊಂಡ ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವ ಅಭಯ ನೀಡಿದೆ. ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದಲೇ ದೈವದ ಉತ್ಸವಕ್ಕೆ ರಿಷಬ್ ಶೆಟ್ಟಿ ಬಂದಿದ್ದರು.

