ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆ ನಟ ದರ್ಶನ್​, ನಟಿ ಪವಿತ್ರಾ ಗೌಡ ಮತ್ತು ಗ್ಯಾಂಗ್​ ನ್ನು ಬಂಧಿಸಲಾಗಿದೆ. ಆದರೀಗ ಅವರ ಜೊತೆಗೆ ಮತ್ತೋರ್ವ ಸ್ಯಾಂಡಲ್​ವುಡ್​ ನಟ ಪ್ರದೋಶ್ ಸಹ ಅರೆಸ್ಟ್​ ಆಗಿದ್ದಾರೆ.

ಪ್ರದೋಶ್​ ಸ್ಯಾಂಡಲ್​ವುಡ್ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ನಟಿಸಿದ್ದಾರೆ. ದರ್ಶನ್ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು.

ಬಿಜೆಪಿ ಮುಖಂಡರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಬಿಜೆಪಿ ಐಟಿ ವಿಭಾಗದಲ್ಲಿಯೂ ಕೆಲಸ ಮಾಡಿದ್ದರಂತೆ. ರವಿಸುಬ್ರಹ್ಮಣ್ಯ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ರೇಣುಕಾಸ್ವಾಮಿಯ ಕೊಲೆ ಕೇಸ್​ನ​ಲ್ಲಿ ಪ್ರದೋಶ್ ನನ್ನು ಬಂಧಿಸಲಾಗಿದೆ.