ಆದಿತ್ಯ ಧರ್ ನಿರ್ದೇಶನ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಸಿನಿಮಾದ ಟ್ರೇಲರ್ ಇಂದು (ಮಾರ್ಚ್ 7) ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಬಗ್ಗೆ ನಟ ರಣವೀರ್ ಸಿಂಗ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಮಾರ್ಚ್‌ 19ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಇಂದು 11:01ಕ್ಕೆ ಜಿಯೊ ಸ್ಟುಡಿಯೋಸ್ ಯೂಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿ ರಣವೀರ್ ಸಿಂಗ್ ಅವರು ರಕ್ತಸಿಕ್ತ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ವಿದೇಶದಲ್ಲಿ ‘ಧುರಂಧರ್ 2’ ಸಿನಿಮಾದ ಬುಕ್ಕಿಂಗ್ ಆರಂಭವಾಗಿದೆ. ಭಾರತದಲ್ಲಿಯೂ ಒಳ್ಳೆಯ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಚಿತ್ರತಂಡಕ್ಕಿದೆ. ಈ ಬಾರಿ ‘ಧುರಂಧರ್ 2’ ಕೇವಲ ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳಲ್ಲಿಯೂ ಏಕಕಾಲಕ್ಕೆ ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ಒಂದು ದಿನದ ಮೊದಲೇ ಮಾರ್ಚ್ 18ಕ್ಕೆ ಧುರಂಧರ್ 2 ಪೇಡ್ ಪ್ರಿಮಿಯರ್ ಶೋ ಇರಲಿದೆ. ಈ ಬಗ್ಗೆ ಟ್ರೇಲರ್ ಕೊನೆಯಲ್ಲಿ ತೋರಿಸಲಾಗಿದೆ.