ಪುಟ್ಟಗೌರಿ ಮದುವೆ, ಕನ್ನಡತಿ ಸೀರಿಯಲ್‌ಗಳ ಮೂಲಕ ಕನ್ನಡಿಗರ ಮನೆಮಾತಾದವರು ನಟಿ ರಂಜನಿ ರಾಘವನ್. ಈಕೆ ಸಿನಿಮಾದಲ್ಲೂ ನಟಿಸಿ ಸೈ ಅನಿಸಿಕೊಂಡವರು. ಜೊತೆಗೆ ಸಾಹಿತಿಯಾಗಿಯೂ ಗುರುತಿಸಿಕೊಂಡು ‘ಕತೆಡಬ್ಬಿ’ ಅನ್ನೋ ಕಥಾಸಂಕಲನದ ಮೂಲಕ ಸಹೃದಯರ ಗಮನ ಸೆಳೆದವರು.

ಇದೀಗ ‘ಕನ್ನಡತಿ’ ಕಡೆಯಿಂದಲೇ ಗುಡ್‌ ನ್ಯೂಸ್ ಬಂದಿದೆ. ಕನ್ನಡತಿಯ ಭುವಿ ತಮ್ಮ ರಿಯಲ್ ಲವ್‌ಸ್ಟೋರಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ರಂಜನಿ ಅವರ ಕೈ ಹಿಡಿಯುತ್ತಿರೋ ಹುಡುಗನ ಹೆಸರು ಸಾಗರ್ ಭಾರಧ್ವಜ್. ಜೀವನ ಸಂಗಾತಿ, ನನ್ನ್‌ ಹುಡುಗ , ಬೆಸ್ಟ್‌ ಫ್ರೆಂಡ್‌ ಫಾರ್‌ಎವರ್ ಅಂತ #ಟಾಗ್‌ ಕೊಟ್ಟಿದ್ದಾರೆ.
ಅವರು ವೃತ್ತಿಯಲ್ಲಿ ಅಥ್ಲೆಟ್​ ಎನ್ನಲಾಗಿದೆ. ರನ್ನರ್, ಸೈಕಲಿಸ್ಟ್​, ಬೈಕರ್. ಅವರು ಇನ್​ಸ್ಟಾಗ್ರಾಮ್ ಖಾತೆಯನ್ನು ಪ್ರೈವೇಟ್ ಆಗಿ ಇಟ್ಟಿದ್ದಾರೆ.‌ ರಂಜನಿ ರಾಘವನ್ ಹಂಚಿಕೊಂಡ ಫೋಟೋಗಳಿಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅವರ ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.

View this post on Instagram

A post shared by ರಂಜನಿ ರಾಘವನ್ (@ranjani.raghavan)