ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರು ಮದುವೆಯಾಗುತ್ತಿದ್ದಾರೆ. ನವೆಂಬರ್‌ನಲ್ಲಿ ಮದುವೆ ನಡೆಯಲಿದೆ. ಬಹುಕಾಲದ ಉದ್ಯಮಿ ಗೆಳೆಯನ ಜೊತೆ ನಟಿ ರಮ್ಯಾ, ದಿವ್ಯ ಸ್ಪಂದನ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಟೆಲ್ ಒಂದರಲ್ಲಿ ಎಂಗೇಜ್‌ಮೆಂಟ್ ನಡೆದಿದೆ. ಅವರ ಹುಟ್ಟುಹಬ್ಬದ ದಿನ (ನವೆಂಬರ್ 29) ಮದುವೆ ನಡೆಯಲಿದೆ ಎಂದು ಸುದ್ದಿ ಹರಡಿತ್ತು.
ಇದೀಗ ಈ ಸುದ್ದಿಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೋಹಕ ತಾರೆ ರಮ್ಯಾ ಅವರು ನನ್ನನ್ನು ಕೇಳದೆ ಯಾವುದೇ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗಳಿಂದ ನಾನು ಹಲವಾರು ಬಾರಿ ಮದುವೆಯಾಗಿದ್ದೇನೆ, ನಾನು ಲೆಕ್ಕ ಕಳೆದುಕೊಂಡಿದ್ದೇನೆ. ನಾನು ಮದುವೆಯಾದರೆ ಮತ್ತು ಯಾವಾಗ ಎಂದು ನೀವು ನನ್ನನ್ನು ಕೇಳಿ ತಿಳಿಯಿರಿ. ದಯವಿಟ್ಟು ಪರಿಶೀಲಿಸದ ಮೂಲಗಳ ಇಂತಹ ವದಂತಿಗಳನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.

