Bengaluru 24°C
Ad

ರಾಮೋಜಿ ಫಿಲ್ಮ್ ಸಿಟಿಯ ಸ್ಥಾಪಕ ರಾಮಮೋಹನ್ ರಾವ್ ನಿಧನ

ರಾಮೋಜಿ ಫಿಲ್ಮ್ ಸಿಟಿಯ ಸ್ಥಾಪಕ ಅಟ್ಲುರಿ ರಾಮ್ ಮೋಹನ್ ರಾವ್ ತಮ್ಮ 87 ವರ್ಷ ವಯಸ್ಸಿಗೆ ನಿಧನರಾದರು.  ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು.

ಹೈದರಾಬಾದ್: ರಾಮೋಜಿ ಫಿಲ್ಮ್ ಸಿಟಿಯ ಸ್ಥಾಪಕ ಅಟ್ಲುರಿ ರಾಮಮೋಹನ್ ರಾವ್ ತಮ್ಮ 87 ವರ್ಷ ವಯಸ್ಸಿಗೆ ನಿಧನರಾದರು.

Ad
300x250 2

ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಇಲ್ಲಿನಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಭಾನುವಾರ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ರಾಮಮೋಹನ್ ರಾವ್ ದೀರ್ಘಕಾಲದವರೆಗೆ ರಾಮೋಜಿ ಗ್ರೂಪ್ ಆಫ್ ಕಂಪನಿ ಜೊತೆ ನಿಕಟ ಸಂಬಂಧ ಹೊಂದಿದ್ದರು. ಈನಾಡು ದಿನಪತ್ರಿಕೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಪತ್ರಕರ್ತರಾಗಿ, ಶಿಕ್ಷಣ ಕ್ಷೇತ್ರ, ನಿರ್ಮಾಪಕರಾಗಿ ರಾಮೋಜಿ ರಾವ್ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ನಿನಗಾಗಿ, ಚಿತ್ರಾ, ಆನಂದ, ಸವಾರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಇವರ ಸಾವಿಗೆ ಅನೇಕರು ಕಂಬನಿ ಸುರಿಸಿದ್ದಾರೆ.

Ad
Ad
Nk Channel Final 21 09 2023
Ad