ಸ್ಯಾಂಡಲ್‌ವುಡ್‌ನ ರಾಜ್ ಬಿ ಶೆಟ್ಟಿ ಇತ್ತೀಚೆಗೆ ‘ರೂಪಾಂತರ’ ಎಂಬ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಇದರ ನಡುವೆ ಅವರು ನಟಿಸಿದ ಸಿನಿಮಾ ಒಂದು ಅರೇಬಿಕ್ ಭಾಷೆಗೆ ಡಬ್ ಆಗಿ ರಿಲೀಸ್‌ಗೆ ಸಿದ್ಧವಾಗಿದೆ.
ರಾಜ್ ಬಿ ಶೆಟ್ಟಿ ಅವರು ಇತ್ತೀಚೆಗೆ ಮಮ್ಮುಟ್ಟಿಗೆ ವಿಲನ್ ಆಗಿ ‘ಟರ್ಬೋ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ನಟನೆಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವೆಟ್ರಿವೇಲ್ ಷಣ್ಮುಖಂ ಎಂಬ ಹೆಸರಿನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಗಮನ ಸೆಳೆದಿದ್ದರು.
ಈಗ ಇದೇ ಚಿತ್ರ ಅರೇಬಿಕ್ ಭಾಷೆಗೆ ಡಬ್ ಆಗಿ ಸದ್ಯದಲ್ಲೇ ರಿಲೀಸ್ ಆಗಲಿದೆ. ಗಲ್ಫ್ ರಾಷ್ಟ್ರದಲ್ಲಿ ‘ಟರ್ಬೋ’ ಚಿತ್ರ ರಿಲೀಸ್ ಆಗುತ್ತಿದೆ. ಇದು ಅರೇಬಿಕ್ ಭಾಷೆಗೆ ಡಬ್ ಆದ ಮೊದಲ ಭಾರತೀಯ ಸಿನಿಮಾವಾಗಿದೆ.

