ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಭೇಟಿಗಾಗಿ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಸೇರಿದ್ದು, ನಟಿ ರಚಿತಾ ರಾಮ್, ಇತ್ತೀಚೆಗೆ ದರ್ಶನ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು.

ದರ್ಶನ್ ಅವರನ್ನು ನೋಡಲೆಂದು ಇಂದು ರಚಿತಾ ರಾಮ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ್ದಾರೆ.

ಮೂರು ಬ್ಯಾಗ್​ಗಳ ಮೂಲಕ ಜೈಲಿಗೆ ಆಗಮಿಸಿದ ರಚಿತಾ, ದರ್ಶನ್ ಆಪ್ತ ಸಚ್ಚಿದಾನಂದ್​ ಜೊತೆಗೆ ಜೈಲಿಗೆ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು, ನಾನು ಅವರ ಬ್ಯಾನರ್​ನಿಂದಲೇ ಇಂಟ್ರಡ್ಯೂಸ್ ಆಗಿದ್ದು. ಅವ್ರು ನನಗೆ ಅವಕಾಶ ಕೊಡಲು ನೋ ಅಂದಿದ್ರೆ, ಬಿಂದ್ಯಾ ರಚಿತಾ ರಾಮ್ ಆಗುತ್ತಿರಲಿಲ್ಲ. ಅವರನ್ನ ನೋಡಿದ ಕೂಡಲೇ ನಾವೆಲ್ಲಾ ಭಾವುಕರಾದ್ವಿ, ಅವರೇ ನಮಗೆ ಧೈರ್ಯ ಹೇಳಿದ್ರು, ಸಮಾಧಾನ ಮಾಡಿದ್ರು ಎಂದು ರಚಿತಾ ಹೇಳಿದ್ದಾರೆ.

ಕಾನೂನಿನಲ್ಲಿ ನಮಗೆ ನಂಬಿಕೆ ಇದೆ. ಆದಷ್ಟು ಬೇಗ ಹೊರಗೆ ಬರ್ತೀನಿ ಅಂತ ದರ್ಶನ್ ಹೇಳಿದ್ದಾರೆ ಅಂತ ರಚಿತಾ ರಾಮ್ ಮಾಧ್ಯಮಗಳ ಎದುರು ಹೇಳಿದ್ರು. ಅದಕ್ಕೆ ನಾನು ನಿಮಗೋಸ್ಕರ ವೇಟ್ ಮಾಡ್ತಾ ಇದ್ದೀವಿ ಬೇಗ ಬನ್ನಿ ಎಂದೆ. ಅವರನ್ನು ನೋಡಿದ ಮೇಲೆ ನನಗೆ ನಿರಾಳವಾಯ್ತು ಎಂದಿದ್ದಾರೆ.