News Karnataka Kannada
Tuesday, April 30 2024
ಮನರಂಜನೆ

ಸಖತ್‌ ಸದ್ದು ಮಾಡುತ್ತಿದೆ ನ್ಯಾಷನಲ್‌ ಕ್ರಶ್ ʼಪುಷ್ಪಾ 2ʼ ಲುಕ್‌

Rash
Photo Credit : Twitter

ಬಹು ನಿರೀಕ್ಷಿತ ಪುಷ್ಪಾ 2 ದಿ ರೂಲ್‌ ಚಿತ್ರವನ್ನು ಅಭಿಮಾನಿಗಳು ಕಾತರುದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಮ್ಮೆ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಅಬ್ಬರಿಸಲು ಸಿದ್ಧರಾಗಿದ್ದಾರೆ. ಇಂದು ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ. ಹಾಗಾಗಿ ಶ್ರೀವಲ್ಲಿ ಅಭಿಮಾನಿಗಳಿಗೆ ಚಿತ್ರ ತಂಡ ಬಿಗ್‌ ಸರ್ಪ್ರೈಸ್ ನೀಡಿದೆ.

‘ಪುಷ್ಪ 2’ ಚಿತ್ರದ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ತಂಡ ಹಂಚಿಕೊಂಡಿದೆ. ಶ್ರೀವಲ್ಲಿಯ ಈ ಲುಕ್‌ನ್ನು ಜನ ತುಂಬ ಇಷ್ಟಪಡುತ್ತಿದ್ದಾರೆ. ಪುಷ್ಪ 2 ರ ಈ ಪೋಸ್ಟರ್ ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ತುಂಬಾ ಪವರ್ ಫುಲ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರ ತಂಡ ಬಿಡುಗಡೆ ಮಾಡಿದ ಪೋಟೋದಲ್ಲಿ ರಶ್ಮಿಕಾ ಮಂದಣ್ಣ ಅವರು ಹಸಿರು ಸೀರೆಯನ್ನು ಉಟ್ಟಿದ್ದಾರೆ. ಅಲ್ಲದೆ ನೀಟಾಗಿ ತಲೆ ಬಾಚಿದ್ದು, ಹಣೆ ಬೊಟ್ಟನ್ನು ಹಂಚಿಕೊಂಡು, ಆಭರಣಗಳನ್ನು ಹಾಕಿಕೊಂಡು, ಕೈಯಲ್ಲಿ ತರಹೇವಾರಿ ಬಣ್ಣದ ಬಳೆಗಳನ್ನು ಹಾಕಿಕೊಂಡು, ಕಣ್ಣಿನ ಹತ್ತಿರ ಕೈಗಳಿಂದ ನೀಡಿದ ಲುಕ್ ಸಖತ್ ವೈರಲ್ ಆಗುತ್ತಿದೆ. ಕೊರಳಲ್ಲಿ ಮಂಗಳಸೂತ್ರ ಹಾಕಿರುವ ನೆಕ್ಲೇಸ್ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನಟಿಯ ಲುಕ್ ಅನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಶೀಘ್ರದಲ್ಲೇ ‘ಪುಷ್ಪ 2’ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಪುಷ್ಪ 2 ಚಿತ್ರ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಂತೆ ಚಿತ್ರದ ಟೀಸರ್‌ಗೆ ಸಂಬಂಧಿತ ಅಪ್‌ಡೇಟ್‌ ಸಹ ನೀಡಿದೆ. ಈ ಚಿತ್ರದ ಟೀಸರ್ ಏಪ್ರಿಲ್ 8 ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.

ಇನ್ನು ಪುಷ್ಟ 2 ಓಟಿಟಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಹಿಂದಿ ತಯಾರಕರು ಬಹಿರಂಗ ಪಡಿಸಿದ್ದಾರೆ. OTT ಪ್ಲಾಟ್‌ಫಾರ್ಮ್ ಸ್ವತಃ ತನ್ನ Instagram ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದೆ.

ಇನ್ನು ‘ಪುಷ್ಪಾ 2’ ಚಿತ್ರದ ಮೊದಲ ಟೀಸರ್ ಅನ್ನು ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು