ಅಯೋಧ್ಯೆ: ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಮತ್ತು ಮಗಳ ಜೊತೆ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅಯೋಧ್ಯೆಗೆ ಭೇಟಿ ನೀಡಿ, ರಾಮಮಂದಿರದಲ್ಲಿ ಕೆಲ ಸಮಯ ಕಳೆದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಭಾರತಕ್ಕೆ ಬಂದು ಬಿಡುವು ಮಾಡಿಕೊಂಡು ಅಯೋಧ್ಯೆಗೆ ಪ್ರಿಯಾಂಕಾ ಭೇಟಿ ಕೊಟ್ಟಿರೋದು ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಕಳೆದ ವರ್ಷ ಪರಿಣಿತಿ ಚೋಪ್ರಾ ಎಂಗೇಜ್ಮೆಂಟ್ಗೆ ಬಂದ ಬಳಿಕ ಇದೀಗ ಭಾರತಕ್ಕೆ ಪ್ರಿಯಾಂಕಾ ಚೋಪ್ರಾ ಬಂದಿದ್ದಾರೆ. ಪ್ರಿಯಾಂಕಾ ತವರು ಮನೆ ಮುಂಬೈನಲ್ಲಿ ಸಮಯ ಕಳೆಯುತ್ತಿದ್ದಾರೆ.