ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ವೊಂದರಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಜೈಲು ಸೇರಿದ ದರ್ಶನ್ ಮತ್ತು ಗ್ಯಾಂಗ್ ಬಗ್ಗೆ ಇಡೀ ಇಂಡಸ್ಟ್ರಿ ಮಾತಾಡುತ್ತಿದೆ. ಈ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಈಗ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ಪ್ರಕಾಶ್ ರಾಜ್ ಅವರು, ದರ್ಶನ್ ಬಗ್ಗೆ ಎಲ್ಲರು ಮಾತಾಡುತ್ತಿದ್ದಾರೆ. ನಾನು ಅದರ ಬಗ್ಗೆ ಮಾತಾಡಿದ್ರೆ ಏನು ಪ್ರಯೋಜನ ಇಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಒಂದೇ ಘಟನೆ ಬಗ್ಗೆ ಎಲ್ಲರೂ ಮಾತಾಡಿದ್ದಾರೆ. ನಾನು ಬೇರೆ ವಿಚಾರದ ಬಗ್ಗೆ ಮಾತಾಡ್ತೀನಿ ಎಂದರು.
ನಾವು ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ಮಾತಾಡೋಣ. ಆಟೋ ಡ್ರೈವರ್ ಸಮಸ್ಯೆಗಳ ಕುರಿತು ಚರ್ಚಿಸೋಣ. ಅಂಗನವಾಡಿ ಕಾರ್ಯಕರ್ತೆಯರ ಸಂಬಳದ ಬಗ್ಗೆ ಕೂಡ ಡಿಸ್ಕಸ್ ಮಾಡೋಣ. ಯಾಕೆ ಯಾವಾಗಲೂ ಒಂದೇ ವಿಷಯದ ಬಗ್ಗೆ ಮಾತಾಡೋದು ಎಂದರು.
ಸೋಷಿಯಲ್ ಮೀಡಿಯಾ ಮಿಸ್ಯೂಸ್ ಬಗ್ಗೆ ಮಾತಾಡಿದ ಪ್ರಕಾಶ್ ರಾಜ್ ಅವರು, ಎಲ್ಲದರಲ್ಲೂ ಒಳ್ಳೆಯದು ಮತ್ತು ಕೆಟ್ಟದು ಇರುತ್ತೆ. ನಾವು ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟದರ ಬಗ್ಗೆ ಬಹಳ ಯೋಚನೆ ಮಾಡಬಾರದು ಎಂದರು.

