ಮಿಳಿನ ‘ಪೆಟ್ಟಾ’ ಖ್ಯಾತಿಯ ಮೇಘಾ ಆಕಾಶ್ ಅವರು ಇಂದು (ಸೆ.15) ಬಹುಕಾಲದ ಗೆಳೆಯ ಸಾಯಿ ವಿಷ್ಣು ಜೊತೆ ಮದುವೆಯಾಗಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಚೆನ್ನೈನಲ್ಲಿ ಸಾಯಿ ವಿಷ್ಣು ಜೊತೆ ಅದ್ಧೂರಿಯಾಗಿ ಮೇಘಾ ಮದುವೆಯಾದರು. 6 ವರ್ಷಗಳು ಪ್ರೀತಿಯಲ್ಲಿದ್ದ ಜೋಡಿ ಇಂದು ವಧು-ವರರಾಗಿದ್ದಾರೆ. ಈ ಮದುವೆಗೆ ಕುಟುಂಬಸ್ಥರು, ಸ್ಟಾರ್ ಕಲಾವಿದರಿಗೆ, ಆಪ್ತರಿಗೆ ಆಹ್ವಾನ ನೀಡಲಾಗಿತ್ತು.

ಇನ್ನೂ ರಾಜಕೀಯ ಹಿನ್ನೆಲೆಯಿಂದ ಬಂದಿರುವ ಸಾಯಿ ವಿಷ್ಣು ಜೋಡಿಯ ಆರತಕ್ಷತೆಗೆ ತಮಿಳುನಾಡಿನ ಸಿಎಂ ಸ್ಟಾಲಿನ್ ಕೂಡ ಭಾಗವಹಿಸಿದ್ದರು. ಹೊಸ ಜೋಡಿಗೆ ಆಶೀರ್ವಾದ ಮಾಡಿದರು.