ಹಿಂದಿ ಕಿರುತೆರೆಯಲ್ಲಿ ‘ಬಿಗ್ ಬಾಸ್ ಒಟಿಟಿ 3’ನೇ ಸೀಸನ್ ಪ್ರಸಾರ ಕಾಣುತ್ತಿದೆ. ಇದರಲ್ಲಿ ಹರ್ಮನ್‌ ಮಲ್ಲಿಕ್‌ ಮತ್ತು ಅವರ ಇಬ್ಬರು ಪತ್ನಿಯರು ಸ್ಪರ್ಧಿಯಾಗಿ ಬಂದಿದ್ದಾರೆ. ಇತ್ತೀಚೆಗೆ ಪಾಯಲ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈಗ ಅವರು ಅರ್ಮಾನ್​ಗೆ ವಿಚ್ಛೇದನ ಕೊಡೋ ನಿರ್ಧಾರಕ್ಕೆ ಬಂದಿದ್ದಾರೆ.

ಪಾಯಲ್ ಅವರು ಈ ಬಗ್ಗೆ ವ್ಲಾಗ್​ನಲ್ಲಿ ಮಾಹಿತಿ ನೀಡಿದ್ದಾರೆ. ‘ಈ ನಾಟಕ ಹಾಗೂ ದ್ವೇಷಗಳಿಂದ ನಾನು ಬೇಸತ್ತಿದ್ದೇನೆ. ನನಗೇನೋ ತೊಂದರೆ ಇಲ್ಲ, ಆದರೆ ಅದು ನನ್ನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದು ನಿಜಕ್ಕೂ ಆಘಾತಕಾರಿ ಹಾಗೂ ಹೊಲಸು ರೀತಿಯದ್ದು ಈ ಕಾರಣಕ್ಕೆ ಅರ್ಮಾನ್ ಅವರಿಂದ ದೂರ ಆಗಲು ಬಯಸುತ್ತಿದ್ದೇನೆ. ಅವರು ಕೃತಿಕಾ ಜೊತೆ ಇರಬಹುದು. ನನ್ನ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.

ಅರ್ಮಾನ್ ಮಲಿಕ್ 2011ರಲ್ಲಿ ಪಾಯಲ್​ನ ಮದುವೆ ಆದರು. ಆ ಬಳಿಕ ಅರ್ಮಾನ್ ಅವರು 2018ರಲ್ಲಿ ಪಾಯಲ್ ಗೆಳತಿ ಕೃತಿಕಾ ಅವರನ್ನು ಕೂಡ ಮದುವೆ ಆದರು. ಪಾಯಲ್​ಗೆ ಮೂವರು ಮಕ್ಕಳು ಹಾಗೂ ಕೃತಿಗೆ ಒಂದು ಮಗು ಇದೆ. ಸದ್ಯ ಅವರು ನೀಡಿರೋ ಹೇಳಿಕೆ ಚರ್ಚೆ ಹುಟ್ಟುಹಾಕಿದೆ.