ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ. ತನಿಖೆ ಚುರುಕಾಗಿ ನಡೆಯುತ್ತಿದೆ. ಇಂದು ಸ್ಥಳ ಮಹಜರಿಗಾಗಿ ಕೊಲೆ ಆರೋಪಿಗಳ ಟೀಂ ಚಿತ್ರದುರ್ಗಕ್ಕೆ ತೆರಳಲಿದ್ದಾರೆ.
ಆದರೀಗ ಇಷ್ಟೆಲ್ಲಾ ಅವಾಂತರ ಬೆಳಕಿಗೆ ಬಂದ ನಂತರ ನಟಿ ಪವಿತ್ರಾ ಗೌಡ ಪಶ್ಚಾತಾಪ ಪಡುತ್ತಿದ್ದು. ಇಷ್ಟೆಲ್ಲಾ ಆಗಿದ್ದು ತನ್ನಿಂದ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ವಿಚಾರ ದರ್ಶನ್ ಗೆ ಗೊತ್ತಾಗಬಾರದಿತ್ತು.
ಈ ಮೆಸೇಜ್ ವಿಚಾರ ಬೇರೆಯವರ ಕಿವಿಗೆ ಬೀಳಬಾರದಿತ್ತು. ನಾನೇ ಪೊಲೀಸರಿಗೆ ದೂರು ನೀಡಿ ಸರಿಪಡಿಸಿಕೊಳ್ಳಬೇಕಿತ್ತು. ಈ ವಿಚಾರ ಗೊತ್ತಾಗಿ ಇಷ್ಟೆಲ್ಲ ಅನಾಹುತ ನಡೆದುಹೋಯ್ತು. ಇಲ್ಲ ಅಂದಿದ್ರೆ ನಾವು ಈಗ ಆರಾಮಾಗಿರಬಹುದಿತ್ತು. ಕೊಲೆ ಹಂತಕ್ಕೆ ಈ ವಿಚಾರ ಹೋಗ್ತಾ ಇರಲಿಲ್ಲ ಎಂದು ಪವಿತ್ರ ಗೌಡ ಪೊಲೀಸ್ ಕಸ್ಟಡಿಯಲ್ಲಿ ಘಟನೆ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾರೆ.

