News Karnataka Kannada
Sunday, April 28 2024
ಮನರಂಜನೆ

ನಿಗೂಢವಾಗಿ ಸಾವನ್ನಪ್ಪಿದ ಆಸ್ಕರ್‌ ಪ್ರಶಸ್ತಿ ವಿಜೇತ ನಟ

Oscar-winning actor found dead under mysterious circumstances
Photo Credit : News Kannada

ದಕ್ಷಿಣ ಕೊರಿಯಾದ ಸೂಪರ್ ಹಿಟ್ ‘ಪ್ಯಾರಾಸೈಟ್’ ಸಿನಿಮಾ ನಟ ಲೀ ಸನ್ ಕ್ಯೂನ್ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿ ಸೌತ್ ಕೊರಿಯನ್ ನಟನ ಮೃತದೇಹ ಪತ್ತೆಯಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಲೀ ನಟನೆಯ ಸೌತ್ ಕೊರಿಯನ್ ಚಿತ್ರ ‘ಪ್ಯಾರಾಸೈಟ್’ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು.

48 ವರ್ಷದ ಲೀ ಸೌತ್ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಲೀ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಗಾಂಜಾ ಸೇರಿದಂತೆ ಸೈಕೋಆಕ್ಟಿವ್ ಡ್ರಗ್ಸ್ ಸೇವಿಸಿದ್ದ ಆರೋಪ ಹೊತ್ತಿದ್ದ ಲೀ ವಿಚಾರಣೆಯ ಮರುದಿನವೇ ಶವವಾಗಿ ಪತ್ತೆಯಾಗಿರುವುದು ಗಮನಾರ್ಹ. ಲೀ ಮರಣದ ಕಾರಣ ತಿಳಿಯಬೇಕಿದೆ.

ಸೆಂಟ್ರಲ್ ಸಿಯೋಲ್‌ನ ಪಾರ್ಕ್‌ ಬಳಿ ನಿಂತಿದ್ದ ಕಾರಿನಲ್ಲಿ ಲೀ ಸನ್ ಕ್ಯೂನ್ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದರು. ಬಾರ್ ನೌಕರನೊಂದಿಗೆ ಡ್ರಗ್ಸ್ ಸೇವಿಸಿದ ಆರೋಪ ಲೀ ಮೇಲಿತ್ತು. ಇದಲ್ಲದೇ, ತನ್ನ ಮನೆಯ ಬಳಿ ಲೀ ಹಲವು ಬಾರಿ ಡ್ರಗ್ಸ್ ಸೇವಿಸಿದ್ದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್‌ನಿಂದ ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು