ಹೈದರಾಬಾದ್: ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಸ್ಟಾರ್‌ ಜೋಡಿಯ ವಿಚ್ಛೇದನಕ್ಕೆ ಬಿಆರ್​ಎಸ್​​ನ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್  ಕಾರಣ ಎಂದು ಸಚಿವೆ ಕೊಂಡ ಸುರೇಖಾ ಹೇಳಿಕೆ ನೀಡಿದ್ದು ಇದೀಗ ರಾಜಕೀಯ ವಲಯದಲ್ಲಿ ಸಚಿವೆಯ ಹೇಳಿಕೆ ಭಾರಿ ಸಂಚಲ ಮೂಡಿಸಿದೆ.

ಬಾಪುಘಾಟ್ ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಈ ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ಸಮಂತಾ ಜೀವನದಲ್ಲಿ ಬಿರುಗಾಳಿ ಎಬ್ಬಿಸಿ ವಿಚ್ಛೇದನ ಕೊಡಲು ಕೆಟಿಆರ್ ಕಾರಣ ಎಂದು ಸಚಿವೆ ಗಂಭೀರ ಆರೋಪ ಮಾಡಿದ್ದಾರೆ ಅಲ್ಲದೆ ಸಮಂತಾ ಸೇರಿದಂತೆ ಚಿತ್ರರಂಗದ ಇತರ ನಟ ನಟಿಯರ ಜೀವನವನ್ನು ಹಾಳು ಮಾಡಿದ್ದಾರೆ ಅಷ್ಟು ಮಾತ್ರವಲ್ಲದೆ ಕೆಟಿಆರ್ ಅವರು ಸಚಿವರಾಗಿದ್ದಾಗ ಹಲವು ಸಿನಿಮಾ ನಾಯಕಿಯರ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ, ನಾಯಕಿಯರ ಫೋನ್ ಕದ್ದಾಲಿಕೆ ಮಾಡಿ ಅವರನ್ನು ಡ್ರಗ್ಸ್ ಚಟಕ್ಕೆ ಸಿಲುಕಿಸಿ ಅವರ ಜೀವನವನ್ನೇ ಹಾಳು ಮಾಡಿದ್ದಾರೆ, ಆದರೆ ಈ ವಿಚಾರ ನನಗೆ ಮಾತ್ರವಲ್ಲದೆ ಚಿತ್ರರಂಗದ ಎಲ್ಲರಿಗೂ ಗೊತ್ತಿದೆ ಅದರೂ ಯಾರೂ ಹೇಳುತ್ತಿಲ್ಲ ಅಷ್ಟೇ ಎಂದಿದ್ದಾರೆ.