ಈ ಅಕಾಲಿಕ ಸಾವು ನೋವು ತಂದಿದೆ. ನಮ್ಮ ತಂಡದ ಮುದ್ದಿನ ನಟನಾಗಿದ್ದನು. ಪ್ರಕೃತಿ ಎಲ್ಲರನ್ನು ಕರೆಸಿಕೊಳ್ಳುತ್ತದೆ ಆದರೆ ಇಷ್ಟು ಬೇಗ ಕರೆಸಿಕೊಳ್ಳುತ್ತೆ ಅಂದುಕೊಂಡಿರಲಿಲ್ಲ. ಕರಾವಳಿ ಭಾಗದಿಂದ ಯಾವುದೇ ಹಿನ್ನೆಲೆ ಇಲ್ಲದೆ ಬಂದ ಪ್ರತಿಭಾನ್ವಿತ ಕಲಾವಿದ, ಜೀವಂತಿಕೆ ಇರುವ ಅಪರೂಪದ ನಟನಾಗಿದ್ದ ಎಂದು ಯೋಗರಾಜ್ ಭಟ್ ನಿರ್ದೇಶಕರು ಹೇಳಿದರು.
ಆ ನಗುವಿನ ಹಿಂದೆ ಏನು ನೋವಿತ್ತು ಗೊತ್ತಿಲ್ಲ, ಯಾವುದೇ ನೋವು ತೋರಿಸಿಕೊಳ್ಳದೆ ಎಲ್ಲರನ್ನು ನಗಿಸುತ್ತಿದ್ದ. ತಂಗಿಯ ಮದುವೆ ಕನಸು ಹೊತ್ತಿದ್ದ, ಅವನ ಕನಸುಗಳ ಬಗ್ಗೆ ಸ್ನೇಹಿತರಿಗೆ ಚೆನ್ನಾಗಿ ಗೊತ್ತಿದೆ. ಮಗು ಮನಸ್ಸಿನ ನಟ, ಕೆಲವೊಮ್ಮೆ ತೀರಾ ಒಳ್ಳೆತನ ಇದ್ದರೂ ಈ ರೀತಿ ಆಗುತ್ತದೆ ಏನೋ..? ನಾವು ನೀವೆಲ್ಲ ಸೇರಿ ಆ ಕನಸು ನನಸು ಮಾಡಬೇಕು. ಸದಾ ಲವಲವಿಕೆಯಿಂದ ಇದ್ದು, ಅಗಾಧವಾಗಿ ನಗಿಸುತ್ತಿದ್ದ.
ಕರಾವಳಿ ಭಾಷೆಯನ್ನು ಇಟ್ಟುಕೊಂಡು ನಗಿಸಿ ಸಹೃದಯರ ಮನ ಗೆದ್ದಿದ್ದು, ಕಾಂತರ ಭಾಗ ಒಂದರಲ್ಲೂ ನಟಿಸುತ್ತಿದ್ದು, ನನ್ನ ನಿರ್ದೇಶನದ ಮನದ ಕಡಲುನಲ್ಲೂ ಅಭಿನಯಿಸಬೇಕಿತ್ತು. ಜೀವನದಲ್ಲಿ ತುಂಬಾ ನೋವಿದ್ದವರಿಗೆ ಮಾತ್ರ ನಗಿಸೋಕೆ ಸಾಧ್ಯ. ಆತ ಏಕಸಂಧಿಗ್ರಹಿ ಒಂದು ಬಾರಿ ಕಲಿತದ್ದನ್ನು, ಹಾಗೆ ಅಭಿನಯಿಸುತ್ತಿದ್ದ, ಆತನ ಹೃದಯದಲ್ಲಿ ಏನು ನೋವಿತ್ತೋ, ಗೊತ್ತಿಲ್ಲ. ಈಗ ಆನಂದವಾಗಿ ಮಲಗಿದ್ದಾನೆ ಎಂದರು.

