ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ದಾಂಪತ್ಯ ಜೀವನದಿಂದ ಬೇರೆ ಬೇರೆಯಾಗಿದ್ದಾರೆ. ಪಾಂಡ್ಯರಿಂದ ಬೇರೆಯಾದರೂ ಮಾಜಿ ಪತ್ನಿ ನತಾಶಾ ಪ್ರೀತಿ ಈಗಲೂ ಪ್ರೀತಿ ಹಾಗೂ ಭಾವನೆಗಳನ್ನ ಹಂಚಿಕೊಳ್ಳುತ್ತಿದ್ದಾರೆ.
ತಮ್ಮ ಇನ್ಸ್ಟಾ ಸ್ಟೇಟಸ್ ಶೇರ್ ಮಾಡಿರುವ ಪಾಂಡ್ಯ ಮಾಜಿ ಪತ್ನಿ ನತಾಶಾ ಅವರು ನಿಜವಾದ ಪ್ರೀತಿ ಸ್ವಾರ್ಥ ಅಲ್ಲ, ಅದು ಯಾವತ್ತೂ ವಿಫಲವಾಗುವುದಿಲ್ಲ. ಪ್ರೀತಿ ಯಾವಾಗಲೂ ತಪ್ಪು ಕಲ್ಪನೆಗಳಿಂದ ಕೂಡಿರಲ್ಲ ಎಂದು ಹೇಳಿದ್ದಾರೆ. ಹೌದು ನತಾಶಾ ಅವರು ಹಾರ್ದಿಕ್ ಪಾಂಡ್ಯರಿಂದ ಬೇರೆಯಾದ ಮೇಲೆ ಪ್ರೀತಿ, ಭಾವನೆಗಳಿಗೆ ಸಂಬಂಧಿಸಿದಂತ ಹೆಚ್ಚು ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ. ಅದರಲ್ಲಿ ಇದು ಒಂದು ಆಗಿದೆ.
ನತಾಶಾ ಶೇರ್ ಮಾಡಿರುವ ಇನ್ಸ್ಟಾ ಸ್ಟೇಟಸ್ನಲ್ಲಿ, ಪ್ರೀತಿ ತಾಳ್ಮೆ, ದಯೆಯಿಂದ ಕೂಡಿದ್ದು ಅದು ಅಸೂಯೆ ಪಡಲ್ಲ. ಪ್ರೀತಿ ಯಾವಾಗಲೂ ಹೆಮ್ಮೆ ಪಡುವುದಿಲ್ಲ, ಯಾರನ್ನೂ ಅವಮಾನಿಸುವುದಿಲ್ಲ. ಸ್ವಾರ್ಥಿಯಂತೂ ಅಲ್ಲವೇ ಅಲ್ಲ. ಪ್ರೀತಿ ಸುಲಭವಾಗಿ ಕೋಪಿಸಿಕೊಳ್ಳಲ್ಲ, ಯಾವತ್ತೂ ತಪ್ಪುಗಳ ಬಗ್ಗೆ ದಾಖಲೆಗಳನ್ನು ಇಡಲ್ಲ. ಕೆಡುಕು ಇದ್ದರೆ ಪ್ರೀತಿ ಸಂತೋಷಪಡುವುದಿಲ್ಲ. ಬದಲಿಗೆ ಅದು ನಮ್ಮನ್ನು ನಂಬಿ ರಕ್ಷಣೆ ಮಾಡುತ್ತಿರುತ್ತದೆ. ಜೀವನ, ಬದುಕಿಗೆ ದೊಡ್ಡ ಭರವಸೆ ಕೊಟ್ಟು ಪ್ರೀತಿ ಎಂದಿಗೂ ವಿಫಲವಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

