ತೆಲುಗು ಹಿರಿಯ ನಟ ಬಾಲಕೃಷ್ಣ ಒಂದಲ್ಲ ಮತ್ತೊಂದು ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಎಷ್ಟೋ ಸಲ ಬಾಲಯ್ಯ ಸಿಟ್ಟಿಗೆದ್ದು ಅಭಿಮಾನಗಳ ಮೇಲೆ ಕೋಪ ಮಾಡಿಕೊಂಡಿರೋ ಘಟನೆಗಳು ನಡೆದಿವೆ. ಇದೇ ಬಾಲಯ್ಯ ಈಗ ಹಿರೋಯಿನ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಪ್ರೀ ರಿಲೀಸ್ ಈವೆಂಟ್‌ಗೆ ಬಾಲಯ್ಯ ಮುಖ್ಯ ಅತಿಥಿಯಾಗಿ ಹೋಗಿದ್ದರು. ಇಲ್ಲಿ ವೇದಿಕೆ ಮೇಲೆ ಎಣ್ಣೆ ಹೊಡೆದು ಬಾಲಯ್ಯ ನಟಿ ಅಂಜಲಿ ಅವರನ್ನು ತಳ್ಳಿದ್ದಾರೆ ಎಂದು ಹೇಳಲಾಗುತ್ತಿರುವ ಘಟನೆಯೊಂದು ನಡೆದಿದೆ. ಹಾಗಾಗಿ ಬಾಲಯ್ಯ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ತಂಡ ವೇದಿಕೆ ಮೇಲಿತ್ತು. ಆಗ ವೇದಿಕೆ ಮೇಲೆ ಬಾಲಯ್ಯ ಬಂದರು. ಪಕ್ಕದಲ್ಲಿದ್ದ ನಟಿ ಅಂಜಲಿಯನ್ನು ಚೂರು ಮುಂದಕ್ಕೆ ಹೋಗಿ ಎಂದ್ರು. ಅಂಜಲಿ ಕೊಂಚ ಪಕ್ಕಕ್ಕೆ ಜರುಗುತ್ತಿದ್ದಂತೆ ಬಾಲಯ್ಯ ಆಕೆಯನ್ನು ತಳ್ಳಿದ್ದಾರೆ. ಈ ಘಟನೆಗೆ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ರು. ಬಾಲಯ್ಯ ವೇದಿಕೆ ಮುಂಭಾಗದಲ್ಲಿ ಕುಳಿತ್ತಿದ್ದಾಗ ಅವರ ಕಾಲಿನ ಬಳಿ ನೀರಿನ ಜತೆಗೆ ಎಣ್ಣೆ ಬಾಟಲ್ ಕೂಡ ಇತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

