News Karnataka Kannada
Thursday, May 02 2024
ಮನರಂಜನೆ

ಮುಂಬೈ: ಮೇ 5ರಂದು ಕೇರಳ ಸ್ಟೋರಿ ಬಿಡುಗಡೆ

The Kerala Story' has set a new record in terms of earnings
Photo Credit : IANS

ಮುಂಬೈ: ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಅವರು ತಮ್ಮ ‘ದಿ ಕೇರಳ ಸ್ಟೋರಿ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ, ಇದರಲ್ಲಿ ನಟಿ ಅದಾ ಶರ್ಮಾ ಹಿಂದೂ ಮಲಯಾಳಿ ನರ್ಸ್ ಆಗಿದ್ದು ಮತಾಂತರವಾಗಿ ಫಾತಿಮಾ ಬಾ ಆಗಿ ಪರಿವರ್ತನೆಯಾಗಿ ಅನುಭವಿಸಿದ ಯಾತನೆಗಳನ್ನು ವಿವರಿಸಿದ್ದಾರೆ. ಚಿತ್ರ ನೈಜ ಘಟನೆಗಳನ್ನು ಅನುಕರಿಸಿದ್ದು, ಕೇರಳದಿಂದ ಕಾಣೆಯಾಗಿ ಇಸ್ಲಾಮಿಕ್‌ ಉಗ್ರಸಂಘಟನೆ ಸೇರಿದ 32 ಸಾವಿರ ಮಹಿಳೆಯರಲ್ಲಿ ಆಕೆಯ ಪಾತ್ರವೂ ಒಂದಾಗಿದೆ.

ಚಲನಚಿತ್ರವು ಸಂಶೋಧನೆ ಮತ್ತು ಸತ್ಯ ಕಥೆಗಳ ಸಮ್ಮಿಲನವಾಗಿದೆ. ಹಿಂದೆ ಇಂತಹ ಕಥೆಗಳನ್ನು ಆಧರಿಸಿ ಚಿತ್ರಗಳನ್ನು ಹೊರತರಲು ಯಾರಿಗೂ ಧೈರ್ಯವಿರಲಿಲ್ಲ. ಆದರೆ ತಾವು ಸತ್ಯ ಹೇಳಬೇಕೆಂಬ ಉದ್ದೇಶದಿಂದ ಚಿತ್ರ ಹೊರತರುತ್ತಿದ್ದು. ಇದು ದೀರ್ಘಕಾಲದವರೆಗೆ ಮರೆಮಾಚಲ್ಪಟ್ಟ ಅನೇಕ ರಹಸ್ಯ ಸತ್ಯಗಳನ್ನು ಬಹಿರಂಗಪಡಿಸುತ್ತದೆ.

ಭಾರತದ ವಿರುದ್ಧ ರೂಪಿಸಲಾಗುತ್ತಿರುವ ಈ ಪಿತೂರಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಸುದೀಪ್ತೋ ಸೇನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದಾ ಅವರಲ್ಲದೆ, ಚಿತ್ರದಲ್ಲಿ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ನಟಿಸಿದ್ದಾರೆ. ಮೇ 5 ರಂದು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು