ಮುಂಬೈ: ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರೋ ಸುದ್ದಿ ಎಂದರೆ ಅದು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗನ ಮದುವೆ. ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ಭರ್ಜರಿ ತಯಾರಿ ನಡೆದಿದೆ. ಇದೇ 12ರ ಇಂದು ಇವರು ಸಪ್ತಪದಿ ತುಳಿಯಲಿದ್ದಾರೆ.

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಮದುವೆ ಮೂರು ದಿನಗಳ ಕಾಲ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳ ಇರಲಿವೆ. ಮದುವೆಗೆ ಡ್ರೆಸ್​ ಕೂಡ ಇದೆ. ಎಲ್ಲರೂ ಭಾರತೀಯ ಟ್ರೆಡಿಷನಲ್ ಡ್ರೆಸ್ ಹಾಕಿಕೊಂಡು ಬರಬೇಕು ಎಂದು ವರದಿಯಾಗಿದೆ.

ಜುಲೈ 13ಕ್ಕೆ ‘ಶುಭ ಆಶೀರ್ವಾದ್’ ಇದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಶೈಲಿಯ ಫಾರ್ಮಲ್ ಉಡುಪುಗಳನ್ನು ಧರಿಸಬೇಕಿದೆ. ಮೂರನೇ ದಿನ ಜುಲೈ 14ಕ್ಕೆ ‘ಮಂಗಳ ಉತ್ಸವ್’ ನಡೆಯಲಿದೆ. ಇದು ಆರತಕ್ಷತೆಯಾಗಿರುತ್ತೆ. ಮೂರು ದಿನಗಳು ನಡೆಯೋ ಮದುವೆಗೆ ಕ್ರೀಡಾ ಲೋಕದ ದಿಗ್ಗಜರು, ಕ್ರಿಕೆಟರ್ಸ್​​, ಬಾಲಿವುಡ್​ ಸೆಲೆಬ್ರಿಟಿಗಳು, ದೇಶದ ಪ್ರತಿಷ್ಠಿತ ಉದ್ಯಮಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ವಿವಿಧ ರಂಗದ ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.