ಭಾರತೀಯ ಚಿತ್ರರಂಗದ ಅಪ್ರತಿಮ ನಟಿ, ಲೇಡಿ ಸೂಪರ್ ಸ್ಟಾರ್' ಶ್ರೀದೇವಿ ಅವರಿಗೆ ಗೌರವ ನಮನ ಸಲ್ಲಿಸುವ ಉದ್ದೇಶದಿಂದ ನಿರ್ದೇಶಕ ಸಂದೀಪ್ ಮಲಾನಿ ಅವರು ಹೊಸ ಸಿನಿಮಾವೊಂದನ್ನು ನಿರ್ಮಿಸಿದ್ದಾರೆ. ಮಲಾನಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರವು ಕೊಂಕಣಿಯಲ್ಲಿ “ಮೋಗ್ ತುಜೊ ಕಿತ್ಲೊ ಆಶೆಲೊಂ” ಹಾಗೂ ತುಳುವಿನಲ್ಲಿ “ಮೋಕದ ಸಿಂಗಾರಿ ಉಂತುದೆ ವೈಯ್ಯಾರಿ” ಚಿತ್ರದ ಫ್ರಿಮಿಯರ್ ಶೋ ನಗರದ ಬಿಗ್ ಸಿನಿಮಾಸ್‍ನಲ್ಲಿ ನಡೆಯಿತು.

ವಾಓ01: ಮಲಾನಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಮೋಗ್ ತುಜೊ ಕಿತ್ಲೊ ಆಶೆಲೊ” ಹಾಗೂ “ಮೊಕೆದ ಸಿಂಗಾರಿ ಉಂತುದೇ ವೈಯ್ಯಾರಿ” ಚಿತ್ರದ ಫ್ರಿಮಿಯರ್ ಶೋ ಮಂಗಳೂರಲ್ಲಿ ನಡೆಯಿತು. ಇನ್ನು ಕೊಂಕಣಿ ಮತ್ತು ತುಳುವಿನಲ್ಲಿ ಏಕಾಕಾಲದಲ್ಲಿಯೇ ಚಿತ್ರ ಬಿಡುಗಡೆಗೊಂಡಿರುವ ಚಿತ್ರ ರಸಿಕರಿಗೆ ಖುಷಿ ತಂದುಕೊಟ್ಟಿತು. ನಗರದ ಬಿಗ್ ಸಿನಿಮಾದಲ್ಲಿ ನಡೆದ ಚಿತ್ರದ ಪ್ರಿಮಿಯರ್ ಶೋನ ಉದ್ಘಾಟನಾ ಸಮಾರಂಭವನ್ನು ಗಣ್ಯರು ದೀಪ ಬೆಳಗಿಸಿ, ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ರೂಪಾಶ್ರೀ ವರ್ಕಾಡಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯ್ತು.

ರಾಷ್ಟ್ರೀಯ ಪ್ರಶಸ್ತಿ ವಿಜೇತ ರಿಚಾರ್ಡ್ ಕ್ಯಾಸ್ಟಲಿನೋ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಹಾಸ್ಯ ನಟ ಸತೀಶ್ ಬಂದೇಲೆ, ರೇ.ಫಾದರ್ ರೂಪೇಶ್, ಪಂಚಭಾಷಾ ನಿರ್ದೇಕರಾದ ಹ್ಯಾರಿ ಫೆರ್ನಾಂಡೀಸ್, ನಿರ್ದೇಶಕ ಸಂದೀಪ್ ಮಲಾನಿ , ನಟಿ ಎಸ್ತರ್ ನೋರ್ಹಾನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಇನ್ನು ಪ್ರಾದೇಶಿಕ ಭಾಷೆಗಳಾದ ಕೊಂಕಣಿ ಮತ್ತು ತುಳುವಿನಲ್ಲಿ ಮೂಡಿಬಂದಿರುವ ಈ ವಿಶಿಷ್ಟ ಸಿನಿಮಾ ಬಗೆ ಸಿನಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

View this post on Instagram

A post shared by News Karnataka (@newskarnataka)