ಮಂಗಳೂರು : ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ಸಿ ಪ್ರಧಾನ ತುಳುಚಿತ್ರ ಮೀರಾ ಈಗ ಮನೆಮಾತಾಗಲು ಸಜ್ಜಾಗಿದೆ. ತುಳು ಮತ್ತು ಕನ್ನಡದ ಜಗತ್ತಿನ ಮೊದಲ OTTವೇದಿಕೆ “ಟಾಕೀಸ್ OTT ಆ್ಯಪ್ ನಲ್ಲಿ, ಇದೇ 26 ನೇ ತಾರೀಖು, ಶುಕ್ರವಾರ, ಸಿನಿಮಾ ಬಿಡುಗಡೆಯಾಗುತ್ತಿದೆ.
ಲಾಂಚುಲಾಲ್ ಕೆ.ಎಸ್ ನಿರ್ಮಾಣದಲ್ಲಿ, ಅಸ್ತ್ರ, ಬ್ಯಾನರ್ ಅಡಿಯಲ್ಲಿ ಮೂಡಿಬಂದ ಈ ಚಿತ್ರ. ಪ್ರೀಮಿಯರ್ ಶೋದಲ್ಲಿಯೇ ಇತಿಹಾಸ ನಿರ್ಮಿಸಿತ್ತು. ಚಿತ್ರದಲ್ಲಿ ನಾಯಕಿಯಾಗಿ ಇಶಿತಾ ಶೆಟ್ಟಿ ಅಭಿನಯಿಸಿದ್ದು, ಜೊತೆಗೆ ಅರವಿಂದ್ ಬೋಳಾರ್, ಜೆ.ಪಿ ತೂಮಿನಾಡು, ಪ್ರಕಾಶ್ ತೂಮಿನಾಡು, ಸ್ವರಾಜ್ ಶೆಟ್ಟಿ, ಮಂಜು ರೈ ಮುಲೂರು,
ರೂಪಾಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಬೇಬಿ ಲಕ್ಷ, ಸೇರಿದಂತೆ ದೊಡ್ಡ ಬಳಗ ಕಾಣಿಸಿಕೊಂಡಿದೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನ-ಅಶ್ವಥ್ , ಛಾಯಾಗ್ರಹಣ-ಅಜಯ್ ಕೆ.ಎಸ್ , ಸಂಕಲನ -ಜಾಬಿನ್ಸ್ ಸೆಬಾಸ್ಟಿಯನ್ , ಸಂಗೀತ- ರಾಜು ಜಯವಕಾಶ್ ಹೆಚ್ಚಿನ ತಾಂತ್ರಿಕ ನಿಪುಣರು ಶ್ರಮಿಸಿದ್ದರಿಂದ, ಈಗ ಈ ಸಿನಿಮಾ OTT ಮೂಲಕ ಇನ್ನಷ್ಟು ಜನರಿಗೆ ತಲುಪುವ ನಿರೀಕ್ಷೆಯಿದೆ.
ಟಾಕೀಸ್ OTT ಆ್ಯಪ್ ಮೂಲಕ ತುಳು ಚಲನಚಿತ್ರಗಳನ್ನು ಸುಲಭವಾಗಿ ಜನತೆಗೆ ತಲುಪಿಸುವುದು ಮುಖ್ಯ ಉದ್ದೇಶ ಎಂದು ಸಿನಿಮಾ ತಂಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಲಾಂಚುಲಾಲ್ ಕೆ.ಎಸ್. ನಿರ್ದೇಶಕ ಅಶ್ವಥ್, ಕಲಾವಿದ ಮಂಜು ರೈ ಮುಲೂರು, ಟಾಕೀಸ್ ಆ್ಯಪ್ ಬಿಸಿನೆಸ್ ಹೆಡ್ ಸ್ಮಿತೇಶ್ ಎಸ್. ಬಾರ್ಯ, ಯೂನಿಟ್ ಮ್ಯಾನೇಜರ್ ವಿಕ್ರಮ್ ರಾವ್ ಉಪಸ್ಥಿತರಿದ್ದರು.

