ಮೋಹಕ ತಾರೆ ರಮ್ಯಾಗೆ ಮದುವೆ ಫಿಕ್ಸ್‌ ಆಗಿದೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಲ್ಲಿ ಮದುವೆ ವಿಷಯ ಪ್ರಸ್ತಾಪ ಆಗಿಯೇ ಆಗುತ್ತದೆ.

ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿ ಜೊತೆ ರಮ್ಯಾ ನಿಶ್ಚಿತಾರ್ಥ ಆಗಿದೆ ಅನ್ನೋ ವಿಚಾರ ಗಾಂದಿನಗರದ ಗಲ್ಲಿಗಲ್ಲಿಗಳಲ್ಲಿ ಇವತ್ತು ಕೇಳಿ ಬಂದಿದೆ. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ.

ರಾಜಸ್ಥಾನದ ಲ್ಲಿ ಆರತಕ್ಷತೆ ನಡೆಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದನ್ನು ಅವರ ಆಪ್ತರು ಕೂಡ ಖಚಿತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ಹಾಗೂ ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.