News Karnataka Kannada
Monday, April 29 2024
ಮಲಯಾಳಂ

ʼವಿಕ್ರಮʼ ಚಿತ್ರದಲ್ಲಿ ‌ಕಾಣಿಸಿಕೊಳ್ಳಲಿದ್ದಾರೆ ಕಾಲಿವುಡ್‌ ಸೂಪರ್‌ ಸ್ಟಾರ್‌ ಸೂರ್ಯ!

Vikram
Photo Credit :

ಕಾಲಿವುಡ್‌ : ಲೋಕೇಶ್ ಕನಕರಾಜ್‌ ನಿರ್ದೇಶನದ ಪ್ಯಾನ್‌ ಇಂಡಿಯಾಚಿತ್ರ ‌ ʼವಿಕ್ರಮ್ʼ ‌ತನ್ನ ಭರ್ಜರಿ ತಾರಂಗಣದ ಕಾರಣದಿಂದ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿದೆ.

ಕಾಲಿವುಡ್‌ ದಿಗ್ಗಜ ನಟರಾದ ಕಮಲ್‌ ಹಸನ್‌, ವಿಜಯ್‌ ಸೇತುಪತಿ ಹಾಗೂ ಖ್ಯಾತ ಮಲೆಯಾಳಂ ನಟ ಫಹದ್‌ ಫಸಿಲ್‌ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರವು ಜೂನ್‌ 3 ರಂದು ತೆರೆಗಪ್ಪಳಿಸಲಿದೆ. ಈ ನಡುವೆ ಚಿತ್ರತಂಡವು ಅಭಿಮಾನಿಗಳಿಗೆ ರೋಮಾಂಚಿತಗೊಳಿಸುವಂತಹ ಅಪ್ದೇಟ್‌ ಒಂದನ್ನು ನೀಡಿದ್ದು, ಕಾಲಿವುಡ್‌ ಸೂಪರ್‌ ಸ್ಟಾರ್‌ ಸೂರ್ಯ ಸಹ ಚಿತ್ರದಲ್ಲಿ ಕಾಣಿಸಿಕೊಳ್ಳುವ ವಿಚಾರ ರಿವಿಲ್‌ ಮಾಡಿದೆ.

ನಿರ್ದೇಶಕ ಲೋಕೇಶ್ ಕನಕರಾಜ್ ಬುಧವಾರ ಪೋಸ್ಟರ್‌ ಒಂದನ್ನು ಹಂಚಿಕೊಳ್ಳುವು ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಈ ಪೋಸ್ಟರ್‌ ನಲ್ಲಿ ಸೂರ್ಯ ಚಿತ್ರದಲ್ಲಿ ಪಾತ್ರನಿರ್ವಹಿಸಿರುವ ವಿಚಾರ ಬಹಿರಂಗಪಡಿಸಿದ್ದಾರೆ.

ʼಚಿತ್ರದಲ್ಲಿ ನಟಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್‌ʼ ಎಂದು ಲೋಕೇಶ್‌ ಅಡಿಟಿಪ್ಪಣಿ ಬರೆದಿದ್ದಾರೆ. ಹೊಸ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿರುವ ಸೂರ್ಯ ಚಿತ್ರವನ್ನು ಮರೆಮಾಡಲಾಗಿದ್ದು, ಸೂರ್ಯ ಪಾತ್ರದ ಬಗ್ಗೆ ಸಸ್ಪೆನ್ಸ್‌ ಕಾಪಾಡಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು