ಮಲಯಾಳಂ ಖ್ಯಾತ ನಟ ನಿರ್ಮಲ್ ಬೆನ್ನಿ ಅವರು ಇಂದು (ಆಗಸ್ಟ್ 23) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮುಂಜಾನೆ ಅವರಿಗೆ ಹೃದಯಾಘಾತ ಉಂಟಾಗಿದೆ ಎನ್ನಲಾಗಿದ್ದು, ಇದೀಗ ಅವರ ನಿಧನಕ್ಕೆ ಸಿನಿತಾರೆಯರು, ರಾಜಕೀಯ ನಾಯಕರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

2012ರಲ್ಲಿ ನಿರ್ಮಲ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಅವರು ಮಲಯಾಳಂನಲ್ಲಿ 12 ವರ್ಷಗಳಲ್ಲಿ 5 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ ‘ನವಗತರ್ಕ್ ಸ್ವಾಗತಂ’ ಆಗಿದೆ. ಲಿಜೋ ಜೋಸ್ ಪೆಲ್ಲಿಸೆರಿ ನಿರ್ದೇಶನದ ‘ಅಮೆನ್’ ಸಿನಿಮಾದಲ್ಲಿ ಕೊಚ್ಚನ್ ಹೆಸರಿನ ಪಾತ್ರ ಮಾಡಿದ್ದು, ಇದರಲ್ಲಿ ಅವರು ಮಾಡಿದ ಪಾತ್ರಕ್ಕೆ ಅಭಿಮಾನಿಗಳು ಫಿಧಾ ಆಗಿದ್ದರು.

ನಿರ್ಮಲ್ ಅವರು ಕಲಾವಿದನಾಗಿ ನಟನೆ ಮಾಡಿದ್ದಕ್ಕಿಂತ ಹೆಚ್ಚು ಯೂಟ್ಯೂಬ್ ವಿಡಿಯೋಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದರು.