ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ಕೆಲವು ವರ್ಷಗಳು ಕಳೆದಿವೆ. ಈ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಕಾರಣ ಆಗಿದೆ ಎನ್ನಲಾದ ಡ್ರಗ್ ಕೇಸ್​ನ ಆರೋಪಿ ಆಗಿದ್ದ ಆಸ್ಟ್ರೇಲಿಯಾದ ವ್ಯಕ್ತಿಯನ್ನು ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಆತ ತಪ್ಪು ಮಾಡಿದ್ದಾನೆ ಎಂದು ಹೇಳಲು ಸರಿಯಾದ ರೀತಿಯ ದಾಖಲೆಗಳು ಇಲ್ಲದ ಕಾರಣ ಕೋರ್ಟ್ ಈ ಆದೇಶ ನೀಡಿದೆ.

ಸುಶಾಂತ್ ಸಿಂಗ್ ರಜಪೂತ್ ಅವರು 2022ರ ಜೂನ್ ತಿಂಗಳಲ್ಲಿ ನಿಧನ ಹೊಂದಿದರು. ಮುಂಬೈ ಫ್ಲ್ಯಾಟ್​ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು. ಇದು ಕೊಲೆ ಎಂದು ಅನೇಕರು ಆರೋಪಿಸಿದರು. ಇದನ್ನು ಹೈ ಪ್ರಾಫೈಲ್ ಕೇಸ್ ಎಂದು ಪರಿಗಣಿಸಲಾಯಿತು. ಇದರ ಬೆನ್ನು ಹತ್ತಿ ಹೋದ ಪೊಲೀಸರಿಗೆ ಡ್ರಗ್ ವಾಸನೆಯೂ ಬಂದಿತ್ತು. ಮಾದಕ ವಸ್ತು ನಿಯಂತ್ರಣ ಮಂಡಳಿ ಈ ಪ್ರಕರಣದ ತನಿಖೆ ಆರಂಭಿಸಿದೆ. ಈ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಬ್ಯಾರಟೆಲ್ಸ್ ಎಂಬಾತ ಅರೆಸ್ಟ್​ ಆಗಿದ್ದ.

2020ರ ನವೆಂಬರ್​ನಲ್ಲಿ ಮಾದಕ ವಸ್ತು ನಿಯಂತ್ರಣ ಮಂಡಳಿ ಬ್ಯಾರಟೆಲ್ಸ್ ಎಂಬಾತನ ಅರೆಸ್ಟ್​ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಜಡ್ಜ್​ ಮಹೇಶ್ ಜಾಧವನ್ ಅವರು ದಾಖಲೆಯ ಕೊರತೆ ಇದೆ ಎಂದು ಅಭಿಪ್ರಾಯಪಟ್ಟರು.

‘ಬ್ಯಾರಟೆಲ್ಸ್ ಅವರು ಅಪರಾಧಿ ಎಂಬುದನ್ನು ಸಾಬೀತು ಮಾಡಲು ಯಾವುದೇ ದಾಖಲೆಗಳು ಇಲ್ಲ’ ಎಂದು ಮಹೇಶ್ ಜಾಧವ್ ಹೇಳಿದ್ದಾರೆ. ಹೀಗಾಗಿ, ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.