ಸ್ಯಾಂಡಲ್‌ವುಡ್‌ನ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಎಂಗೇಜ್ ಆಗಿದ್ದಾರೆ. ಕೆಜಿಎಫ್ -2 ಚಿತ್ರದ ಗಾಯಕಿ ಸುಚೇತ ಬಸ್ರೂರ ಜೊತೆಗೇನೆ ಎಂಗೇಜ್ ಆಗಿದ್ದಾರೆ. ಇತ್ತೀಚಿಗೆ ಈ ಜೋಡಿಯ ಎಂಗೇಜ್‌ಮೆಂಟ್ ಆಗಿದೆ. ಸ್ವತಃ ಪ್ರಮೋದ್ ಮರವಂತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನ ಕೂಡ ಹಂಚಿಕೊಂಡಿದ್ದಾರೆ.

ಪ್ರಮೋದ್ ಮರವಂತೆ ಮತ್ತು ಸುಚೇತ ಬಸ್ರೂರ ಇತ್ತೀಚಿಗೆ ಉಡುಪಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನ ಸ್ವತಃ ಪ್ರಮೋದ್ ಮರವಂತೆ ಹಂಚಿಕೊಂಡಿದ್ದಾರೆ. ಹಾಗೆ ಎಂಗೇಜ್ ಆಗಿರೋ ವಿಷಯವನ್ನು ಕೂಡ ಕವಿತೆಯ ಸಾಲುಗಳಲ್ಲಿಯೇ ಹೇಳಿಕೊಂಡಿದ್ದಾರೆ.

ಪ್ರಮೋದ್ ಮರವಂತೆ ತಮ್ಮ ಎಂಗೇಜ್ ಮೆಂಟ್ ವಿಷಯವನ್ನ ಹೀಗೆ ಹೇಳಿದ್ದಾರೆ. “ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ” ಅಂತಲೇ ಬರೆದಿದ್ದಾರೆ. ಈ ಮೂಲಕ ತಮ್ಮ ಜೀವನದಲ್ಲಿ ಸಂಗಾತಿಯ ಆಗಮನ ಆಗಿದೆ ಅನ್ನೋದನ್ನ ಈ ರೀತಿ ವಿಶೇಷವಾಗಿಯೇ ಹೇಳಿದ್ದಾರೆ.

ಪ್ರಮೋದ್ ಮರವಂತೆ ಇಲ್ಲಿವರೆಗೂ ಸಾಕಷ್ಟು ಹಾಡುಗಳನ್ನ ಬರೆದಿದ್ದಾರೆ. ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡನ್ನು ಬರೆದು ಎಲ್ಲರ ಹೃದಯ ಗೆದಿದ್ದಾರೆ. ಮುಂದಿನ ನಿಲ್ದಾಣ ಚಿತ್ರದಲ್ಲಿ ಇನ್ನೂನು ಬೇಕಾಗಿದೆ ಅನ್ನುವ ಹಾಡು ಬರೆದಿದ್ದರು.

ಪ್ರಮೋದ್ ಮದುವೆ ಆಗುತ್ತಿರೋ ಗಾಯಕಿ ಸುಚೇತ ಬಸ್ರೂರ ಈ ಹಿಂದೆ ಕೆಜಿಎಫ್-2 ಚಿತ್ರದ ಗಗನ ನೀ ಭುವನ ನೀ ಹಾಡನ್ನ ಹಾಡಿದ್ದರು. ಮದುವೆ ಆಗೋ ಹುಡುಗಿ ಗಾಯಕಿ ಆದ್ರೆ, ಮದುವೆ ಆಗೋ ಹುಡುಗ ಲಿರಿಕ್ ರೈಟರ್ ಆಗಿದ್ದಾರೆ.