ಬೆಂಗಳೂರು: ರಿಷಬ್ ಶೆಟ್ಟಿ ನಿರ್ಮಾಣದ, ಪ್ರಮೋದ್ ಶೆಟ್ಟಿ ನಟನೆಯ ಕಾಮಿಡಿ, ಥ್ರಿಲ್ಲರ್ ಕತೆಯುಳ್ಳ ಲಾಫಿಂಗ್ ಬುದ್ದ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.
ಇದೇ ಆಗಸ್ಟ್ 30ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಇಂದು ಬಿಡುಗಡೆಯಾದ ಟ್ರೈಲರ್ ಸಿನಿ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸರಳವಾದ ಕತೆಯುಳ್ಳ ಲಾಫಿಂಗ್ ಬುದ್ಧ ಸಿನಿಮಾ ಧಡೂತಿ ದೇಹದ ಪೊಲೀಸಪ್ಪನ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ನಡೆಯುವ ಘಟನೆಗಳನ್ನೊಳಗೊಂಡಿದೆ.
ಪೊಲೀಸ್ ಕಾನ್ಸ್ಟೇಬಲ್ ಆಗಿ ಪ್ರಮೋದ್ ಶೆಟ್ಟಿ ನಟಿಸಿದ್ದು, ತಮ್ಮ ಭಾರೀ ದೇಹಕ್ಕೆ ಹಾಸ್ಯ, ಟೀಕೆ, ನಿಂದನೆಗೊಳಗಾಗುವುದು ಹಾಗೂ ತಮ್ಮ ತೂಕ ಕರಗಿಸಿಕೊಳ್ಳಲು ಎಲ್ಲಿಲ್ಲದ ಪ್ರಯತ್ನ ಪಡುವುದನ್ನು ಸಿನಿಮಾದಲ್ಲಿ ಹಾಸ್ಯಮಯವಾಗಿ ತೋರಿಸಲಾಗಿದೆ ಎಂಬುದು ಟ್ರೈಲರ್‌ನಲ್ಲಿ ತಿಳಿದುಬಂದಿದೆ.
ಒಬ್ಬ ನಾಯಕ ನಟನಾಗಿ ಪ್ರಮೋದ್ ಶೆಟ್ಟಿ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಭರತ್ ರಾಜ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ವಿಷ್ಣು ವಿಜಯ್ ಸಂಗೀತ ನೀಡಿದ್ದಾರೆ. ತೇಜು ಬೆಳವಾಡಿ, ಸುಂದರ್ ರಾಜ್, ದಿಗಂತ್ ಸೇರಿದಂತೆ ಇನ್ನಿತರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

