ಚಲನಚಿತ್ರ ವಿಮರ್ಶೆ: ಕಿಸಿ ಕಾ ಭಾಯ್ ಕಿಸಿ ಕಿ ಜಾನ್: ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಚಿತ್ರ

ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಸಲ್ಮಾನ್‌ ಖಾನ್‌ ಅವರ ಈ ಹಿಂದಿನ ಹಲವು ಚಿತ್ರಗಳಂತೆ ಹಳೆಯ ಕಥೆಯ ನಿರೂಪಣೆ ಮತ್ತೆ ಪುನಾರವರ್ತನೆಯಾಗಿದೆ. ಚಿತ್ರದ ನಾಯಕಿ ಪೂಜೆ ಹೆಗ್ಡೆ ಅವರು  ಪ್ರಮುಖ ಭೂಮಿಕೆಯಲಿದ್ದು,  ಮೊದಲರ್ಧ ಭಾಗದಲ್ಲಿ ನಟನೆ,  ಸೌಂದರ್ಯಗಳಿಂದ ಚಿತ್ರರಸಿಕರ ಮನಸೆಳೆಯುವ ಅವರು ಎರಡನೇ ಭಾಗದಲ್ಲಿ ಬೋರ್‌ ಹೊಡೆಸುತ್ತಾರೆ.

ಸಲ್ಮಾನ್ ಖಾನ್ ಅಭಿನಯದ ಈ ಹಿಂದಿನ ಚಿತ್ರಗಳಂತೆಯೇ ಚಿತ್ರದ ಆರಂಭದ ಹೂರಣವಿದೆ. ತರ್ಕರಹಿತ ಸಂಭಾಷಣೆ ಸಿನಿರಸಿಕರ ಮನಗೆಲ್ಲುವಲ್ಲಿ ವಿಫಲತೆ ಕಂಡಿದೆ. ಆದರೆ ಸಲ್ಮಾನ್‌ ಖಾನ್‌ ಅವರಿಗೆ ಅವರದ್ದೇ ಆದ ಫ್ಯಾನ್‌ ಕ್ಲಬ್‌ ಇದ್ದು,  ಅವರ ಅಭಿಮಾನಿಗಳು ಖಾನ್‌ ಡೈಲಾಗ್‌, ಮ್ಯಾನರಿಸಂಗೆ ಮನಸೋಲಬಹುದು ಹೊರತು ಬೇರೇನೂ ಇಲ್ಲ. ವಿಚಿತ್ರವೆಂದರೇ ಈ ಬಾರಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರವೂ ಸಲ್ಮಾನ್‌ ಖಾನ್‌ ಅವರ ಕಟ್ಟಾ ಅಭಿಯಾನಿಯ ಸಹನೆಯನ್ನೂ ಪರೀಕ್ಷಿಸುವ ಚಿತ್ರವಾಗಿದೆ ಎಂದರೆ ತಪ್ಪಾಗಲಾರದು.  ತಮಾಷೆಯೂ ಇಲ್ಲ, ಗಂಭೀರವೂ ಅಲ್ಲ ಎಂಬಂತಿದೆ.

ಚಿತ್ರದಲ್ಲಿ ಸಲ್ಮಾನ್ ಅವರ ಮೂವರು ಕಿರಿಯ ಸಹೋದರರ ಏಕೈಕ ಗುರಿ ಖಾನ್‌ ಅವರಿಗೆ ಸೂಕ್ತ ವಧುವನ್ನು ಹುಡುಕುವ ಅಂಶವಿದೆ.  ದ್ವಿತೀಯಾರ್ಧದಲ್ಲಿ, ಚಿತ್ರವು ದಕ್ಷಿಣ ಭಾರತಕ್ಕೆ ಸ್ಥಳಾಂತರಗೊಳ್ಳುತ್ತದೆ. ಆದರೆ ಅದಕ್ಕೊಂದು ತಾರ್ಕಿಕ ಅಂತ್ಯವೇ ದೊರೆಯುವುದಿಲ್ಲ.  ಚಿತ್ರ ಒಂದು ಹಂತದಲ್ಲಿ ಏಕತಾನತೆ, ನೀರಸವಾಗಿ ಭಾಸವಾಗುತ್ತದೆ.

ಈ ಚಿತ್ರವು ೨೦೧೪ ರ ತಮಿಳು ಚಿತ್ರ ‘ವೀರಂ’ ನ ರಿಮೇಕ್ ಆಗಿದ್ದರೂ ಫರ್ಹಾದ್ ಸಂಜಿ ಅವರ ನಿರ್ದೇಶನ  ಕಳಪೆಯಾಗಿದೆ.  ಆದರೆ ಛಾಯಾಗ್ರಹಣ ಉತ್ತಮವಾಗಿದೆ, ವಿಶೇಷವಾಗಿ ಮೆಟ್ರೋ ರೈಲು ಮತ್ತು ಕ್ಲೈಮ್ಯಾಕ್ಸ್ ಫೈಟ್ ದೃಶ್ಯಗಳು ಮನಸೆಳೆಯುತ್ತವೆ.

Sushma K

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

4 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

4 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

4 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

5 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

5 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

6 hours ago