ಧ್ರುವ ಸರ್ಜಾ ನಟನೆಯ ‘KD: The Devil’ ಚಿತ್ರದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ನಿರ್ದೇಶಕ ಪ್ರೇಮ್ ಅವರೇ ಬರೆದಿರುವ ಈ ಹಾಡಿನ ಸಾಹಿತ್ಯ ಅತ್ಯಂತ ಅಶ್ಲೀಲವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಿಗರು ಚಿ. ಉದಯ್ ಶಂಕರ್ ಮತ್ತು ಆರ್.ಎನ್. ಜಯಗೋಪಾಲ್ ಅವರಂತಹ ದಿಗ್ಗಜ ಸಾಹಿತಿಗಳ ಕಾಲವನ್ನು ಸ್ಮರಿಸುತ್ತಾ, ಇಂದಿನ ಗೀತರಚನೆಯ ಪತನದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಹಾಡಿನ ಹಿಂದಿ ಆವೃತ್ತಿಯಾದ “ಸರ್ಕೆ ಚುನರ್ ತೇರಿ ಸರ್ಕೆ” (Sarke Chunar Teri Sarke) ಗೆ ಕನ್ನಡಿಗರಿಗಿಂತಲೂ ಹೆಚ್ಚಿನ ಆಕ್ರೋಶ ಬಾಲಿವುಡ್‌ನಲ್ಲಿ ವ್ಯಕ್ತವಾಗಿದೆ.

ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರು ” ಗೀತರಚನೆ ಇಷ್ಟೊಂದು ಕೆಳಮಟ್ಟಕ್ಕೆ ಕುಸಿದಿರುವುದು ನೋಡಿ ಬೇಸರವಾಗುತ್ತಿದೆ, ನನಗೆ ಹೇಳಲು ಮಾತುಗಳೇ ಹೊರಡುತ್ತಿಲ್ಲ” ಎಂದು ಎಕ್ಸ್ (X) ನಲ್ಲಿ ಪೋಸ್ಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೆವಿಎನ್ ಪ್ರೊಡಕ್ಷನ್ಸ್ ಹಿಂದಿ ವರ್ಷನ್ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿದೆ.

View this post on Instagram

A post shared by News Karnataka (@newskarnataka)