ಬಾಲಿವುಡ್​ ಬ್ಯೂಟಿ ಕರೀನಾ ಕಪೂರ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮ ದಿನದ ವಿಶೇಷದಂದು ಬೆಬೋ ಕೆಂಪು ಗೌನ್​ನಲ್ಲಿ ಮಿಂಚಿದ್ದಾರೆ. ಬಾಲಿವುಡ್​ ಸಿನಿಮಾ ರಂಗಕ್ಕೆ ಕಾಲಿಟ್ಟು ಕರೀನಾ ಕಪೂರ್​ ಖಾನ್​ ಈಗಾಗಲೇ 25 ವರ್ಷ ಪೂರೈಸಿದ್ದಾರೆ. ಇದೇ ಖುಷಿಯಲ್ಲಿ ಪಿವಿಆರ್​​ ಸೆಪ್ಟೆಂಬರ್​ 27ರವರೆಗೆ ಕರೀನಾ ಅವರ ಸಿನಿಮಾವನ್ನು ಸ್ಕ್ರೀನ್​​ ಮೇಲೆ ಪ್ರದರ್ಶನ ಮಾಡುತ್ತಿದೆ. ಆ ಮೂಲಕ ಡಬಲ್​ ಸರ್​ಪ್ರೈಸ್​​ ಕೊಡುತ್ತಿದೆ.

ಇಂದು ಕರೀನಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆಫ್​ ಸ್ಕ್ರೀನ್​ ಮತ್ತು ಆನ್​ಸ್ಕ್ರೀನ್​ನಲ್ಲಿ ಸಖತ್​ ಮೋಡಿ ಮಾಡಿದ ಕರೀನಾ ಫ್ಯಾಷನ್​ ಲೋಕದಲ್ಲೂ ಮಿಂಚು ಹರಿಸಿದ್ದಾರೆ. ಜಬ್​ ವಿ ಮೇಟ್​​, ಚಮೇಲಿ, ಹೀರೋಯಿನ್​​ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಅನೇಕ ಅಭಿಮಾನಿಗಳ ಮನ ಕದ್ದ ನಟಿ ಕರೀನಾ ಹೆಸರಿನಲ್ಲಿ ಸದ್ಯ ಕೆಕೆಕೆ ಫಿಲ್ಮ್​​ ಫೆಸ್ಟಿವಲ್​​ ನಡೆಸಲಾಗುತ್ತಿದೆ.